Kannada Duniya

Sun exposure: ಬಿಸಿಲಿನಲ್ಲಿ ದೀರ್ಘಕಾಲವಿರುವುದರಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆಯಂತೆ..

ಸೂರ್ಯನ ನೇರಳಾತೀತ ಕಿರಣ ಮಾನವನ ಚರ್ಮಕ್ಕೆ ಹಾನಿಕಾರಕವೆಂದು ಎಲ್ಲರಿಗೂ ತಿಳಿದೆ ಇದೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಸೂರ್ಯನ ಬೆಳಕು ಕೂಡ ನಮಗೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಂತೆ. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಹಿಳೆಯರ ಮೇಲೆ ಸಂಶೋಧನೆ ನಡೆಸಲಾಗಿದ್ದು, ಆ ವೇಳೆ ಈ ಮಾಹಿತಿ ತಿಳಿದುಬಂದಿದೆ ಎನ್ನಲಾಗುತ್ತಿದೆ. ದಿನಕ್ಕೆ ಮೂರು ಗಂಟೆಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಸಿಗುವಂತಹ ವಿಟಮಿನ್ ಗಳಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಅರ್ಧದಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ. ಹಾಗಾಗಿ ವಾರದಲ್ಲಿ 19 ಗಂಟೆಗಳ ಕಾಲ ಬಿಸಿಲಿನಲ್ಲಿ ಮಹಿಳೆಯರು ಕುಳಿತುಕೊಂಡರೆ ದೇಹದ ಅನೇಕ ಸಮಸ್ಯೆಗಳು ದೂರವಾಗುತ್ತದೆಯಂತೆ.

Breast health: ಸ್ತನಗಳು ಆರೋಗ್ಯವಾಗಿರಲು ಮಹಿಳೆಯರು ಪ್ರತಿದಿನ ಈ ಆಹಾರ ಸೇವಿಸಿ

ಅಲ್ಲದೇ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದರಿಂದ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ಇದು ದೇಹದಲ್ಲಿ ನೋವು ಮತ್ತು ತೂಕ ಹೆಚ್ಚಳ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಚರ್ಮದ ಕ್ಯಾನ್ಸರ್ ಸಮಸ್ಯೆಯಿರುವವರು ಸೂರ್ಯ ಬಿಸಿಲಿನಲ್ಲಿ ಕುಳಿತುಕೊಳ್ಳಬೇಡಿ.

Sun exposure cuts breast cancer risk in women.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...