Kannada Duniya

ಹೆರಿಗೆಯಾದ ಮಹಿಳೆಯರು ಬೆಲ್ಲ ತಿಂದರೆ ಏನಾಗುತ್ತದೆ ಗೊತ್ತಾ?

ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಹಾಗೇ ಈ ಸಮಯದಲ್ಲಿ ತಾಯಂದಿರು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುತ್ತಾರೆ. ಅಂತಹ ಸಂದರ್ಧಲ್ಲಿ ಮಹಿಳೆಯರು ಬೆಲ್ಲವನ್ನು ಸೇವಿಸಿದರೆ ಏನಾಗುತ್ತದೆ? ಎಂಬುದನ್ನು ತಿಳಿಯಿರಿ.

ಹೆರಿಗೆಯ ಬಳಿಕ ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಫೈಬರ್, ಕಬ್ಬಿಣ, ಪ್ರೋಟೀನ್, ಆರೋಗ್ಯಕರ ಕೊಬ್ಬು ಮುಂತಾದ ಖನಿಜಗಳಿರುತ್ತದೆ. ಇದು ಹೆರಿಗೆಯಾದ ಮಹಿಳೆರಲ್ಲಿ ಕಾಡುವಂತಹ ಸುಸ್ತು, ದಣಿವನ್ನು ನಿವಾರಿಸುತ್ತದೆ. ಇದು ತಾಯಿಯ ಎದೆಹಾಲನ್ನು ಹೆಚ್ಚಿಸುತ್ತದೆ.

ಹೆರಿಗೆಯಾದ ಮಹಿಳೆರಲ್ಲಿ ಮೂಳೆಗಳು ದುರ್ಬಲವಾಗುತ್ತದೆ. ಬೆಲ್ಲದಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಅದು ಮೂಳೆಗಳ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದು ನೋವನ್ನು ನಿವಾರಿಸುತ್ತದೆ. ಅಲ್ಲದೇ ಇದು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಖಿನ್ನತೆ , ಒತ್ತಡವನ್ನು ದೂರ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...