Kannada Duniya

Peepal tree: ಅರಳೀಮರದ ಎಲೆಗಳನ್ನು ಬಳಸಿ ಈ ಕಾಯಿಲೆಗೆ ಚಿಕಿತ್ಸೆ ನೀಡಿ…!

ಅರಳೀಮರವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಮತ್ತು ಈ ಮರವು ಹೆಚ್ಚು ಆಮ್ಲಜನಕವನ್ನು ನೀಡುತ್ತದೆ. ಅರಳೀಮರದ ತೊಗಟೆಯನ್ನು ಬಳಸಿ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಬಹುದು. ಹಾಗೇ ಅದರ ಎಲೆಗಳಿಂದ ಕೂಡ ರೋಗಗಳಿಗೆ ಚಿಕಿತ್ಸೆ ನೀಡಬಹುದು. ಹಾಗಾದ್ರೆ ಈ ಬಗ್ಗೆ ತಿಳಿದುಕೊಳ್ಳಿ.

ಅರಳೀಮರದ ಎಲೆಗಳನ್ನು ಜಗಿಯುವುದರಿಂದ ಒತ್ತಡವನ್ನು ನಿವಾರಿಸಬಹುದು. ಇದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ಹಾಗೇ ಅರಳೀಮರದ ಎಲೆಗಳನ್ನು ರುಬ್ಬಿಕೊಂಡು ಒಂದು ತಿಂಗಳ ಕಾಲ ಕುಡಿಯಿರಿ. ಇದರಿಂದ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ.

Child care:ಚಳಿಗಾಲದಲ್ಲಿ ನಿಮ್ಮ ಮಕ್ಕಳನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ ಈ ಗಿಡಮೂಲಿಕೆಗಳು…!

ಇದು ಗ್ಯಾಸ್, ಆ್ಯಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹಾಗಾಗಿ ಇದನ್ನು ಪಿತ್ತರಸ ವಿನಾಶಕ ಎಂದು ಪರಿಗಣಿಸುತ್ತಾರೆ.ಅರಳೀಮರದ ಎಲೆಗಳ ರಸ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯು ದೂರವಾಗುತ್ತದೆ.

ಅರಳೀಮರದ ತೊಗಟೆಯಲ್ಲಿ ಕೂಡ ಔಷಧೀಯ ಗುಣಗಳಿವೆ.ಹಾಗಾಗಿ ಹುಣ್ಣು, ಮೊಡವೆಗಳಂತಹ ಚರ್ಮದ ಸಮಸ್ಯೆಗಳನ್ನು ಇದರಿಂದ ನಿವಾರಿಸಬಹುದು.

ಅರಳೀಮರದ ಎಲೆಗಳಿಂದ ರಸ ತೆಗೆದು ಅದನ್ನು ಮೊಡವೆಗಳ ಮೇಲೆ ಹಚ್ಚಿದರೆ ಅದು ನಿವಾರಣೆಯಾಗುತ್ತದೆ. ಹಾಗೇ ಅದರ ತೊಗಟೆ ಮತ್ತು ಎಲೆಗಳನ್ನು ರುಬ್ಬಿ ಮುಖಕ್ಕೆ ಹಚ್ಚಿದರೆ ಸುಕ್ಕುಗಳು ನಿವಾರಣೆಯಾಗುತ್ತದೆ ಮತ್ತು ಚರ್ಮ ಬಣ್ಣ ಬೆಳ್ಳಗಾಗುತ್ತದೆ.

Medicinal benefits of Peepal tree leaves and bark


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...