Kannada Duniya

ಪರೀಕ್ಷೆಯ ಒತ್ತಡದಿಂದ ನಿಮ್ಮ ಮಕ್ಕಳು ಸುಧಾರಿಸಿಕೊಳ್ಳಲು ಈ ಆಹಾರ ನೀಡಿ

ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತದೆ. ಹಾಗಾಗಿ ಅವರು ಹೆಚ್ಚು ಸಮಯ ಓದುವುದರಲ್ಲೇ ಕಳೆಯುತ್ತಾರೆ. ಇದರಿಂದ ಅವರ ಮೇಲೆ ಒತ್ತಡ ಬೀಳಬಹುದು. ಇದರಿಂದ ಅವರು ಮಾನಸಿಕ ಸಮಸ್ಯೆಗೆ ಒಳಗಾಗಬಹುದು. ಹಾಗಾಗಿ ಈ ಪರೀಕ್ಷೆಯ ಒತ್ತಡವನ್ನುನಿವಾರಿಸಲು ಈ ಆಹಾರ ನೀಡಿ.

ಡಾರ್ಕ್ ಚಾಕೋಲೇಟ್ : ಇದು ಮೆದುಳನ್ನು ಚುರುಕಾಗಿಸುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್ ಗಳು ನಿಮ್ಮ ಕಲಿಕೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅರಿಶಿನ : ಇದು ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕರ್ಕ್ಯುಮಿನ್ ಅಂಶವಿದ್ದು, ಇದು ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೆದುಳು ಚುರುಕಾಗುತ್ತದೆ.

ಬಾದಾಮಿ : ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಪೋಷಕಾಂಶ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಪರೀಕ್ಷಾ ಸಮಯದಲ್ಲಿ ಬಾದಾಮಿಯನ್ನು ಹೆಚ್ಚು ತಿನ್ನಿ.

ಕುಂಬಳಕಾಯಿ ಬೀಜ : ಇದರಲ್ಲಿ ಕಬ್ಬಿಣ, ತಾಮ್ರ, ಸತು ಮುಂತಾದವು ಕಂಡುಬರುತ್ತದೆ. ಇದು ಮನಸ್ಸನ್ನು ಚುರುಕುಗೊಳಿಸುತ್ತದೆ ಮತ್ತು ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...