Kannada Duniya

ಮಹಿಳೆಯರೇ ಎಚ್ಚರ..!… ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ….!

ಹೃದಯಾಘಾತ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಎದೆ ನೋವು, ಉಸಿರಾಟದ ಸಮಸ್ಯೆ, ಚಳಿಯಲ್ಲೂ ಬೆವರುವುದು, ವಾಂತಿಯ ಲಕ್ಷಣ, ದೇಹದ ಮೇಲ್ಭಾಗದಲ್ಲಿ ನೋವು ಹಾಗೂ ಸುಸ್ತಾದ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮಹಿಳೆಯರಲ್ಲಿ ಈ ಯಾವ ಲಕ್ಷಣಗಳೂ ಸರಿಯಾಗಿ ಕಾಣಿಸಿಕೊಳ್ಳದೆ ಹೋಗುವ ಸಂಭವವಿದೆ.

-ಶೇ. 50ಕ್ಕೂ ಹೆಚ್ಚಿನ ಮಹಿಳೆಯರು ಅನಿಯಂತ್ರಿತ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಾರೆ ಹಾಗೂ ಸಣ್ಣ ವಯಸ್ಸಿನಲ್ಲೇ ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂಬ ಅಂಶವನ್ನು ಅಧ್ಯಯನವೊಂದು ಹೊರಹಾಕಿದೆ. ಹಾಗಾಗಿ ಮಹಿಳೆಯರು ಕಡಿಮೆ ಎಣ್ಣೆಯಂಶವಿರುವ ಹಾಗೂ ಉಪ್ಪಿನಂಶ ಕಡಿಮೆ ಇರುವ ಪದಾರ್ಥಗಳನ್ನು ಸೇವಿಸುವತ್ತ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

Cracked heels: ಪಾದಗಳಲ್ಲಿ ಬಿರುಕು ಬಿಡಲು ಕಾರಣವೇನು ಗೊತ್ತಾ…?

-ದಿನಕ್ಕೆ ಮೂವತ್ತು ನಿಮಿಷವನ್ನು ವಾಕಿಂಗ್ ಗಾಗಿ ಮೀಸಲಿಡಲು ಪ್ರಯತ್ನಿಸಿ. ಇದು ನಿಮ್ಮದೇಹ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ.

-ಅಡುಗೆ ಮನೆಯಲ್ಲಿ ಉಳಿದ ಪದಾರ್ಥಗಳನ್ನೆಲ್ಲಾ ಸೇವಿಸುತ್ತಾ ನೀವು ಜಂಕ್ ಬಾಕ್ಸ್ ಆಗಬೇಕಿಲ್ಲ. ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಿ. ಸಾಕಷ್ಟು ನಿದ್ದೆ ಮಾಡಿ, ಒತ್ತಡದಿಂದ ದೂರವಿರಿ.

ತೂಕ ಇಳಿಸಿಕೊಳ್ಳಲು ತತ್ವಗಳು ಪಾಲಿಸಿ….! ಹಾಗಾದ್ರೆ ಯಾವುದು ಗೊತ್ತಾ….?

-ಮದ್ಯಪಾನ ಹಾಗೂ ಧೂಮಪಾನ ಮಾಡುತ್ತಿದ್ದರೆ ಅದು ನಿಯಂತ್ರಣದಲ್ಲಿರಲಿ. ದೇಹತೂಕ ಮಿತಿಮೀರಲು ಬಿಡದಿರಿ. ವೈದ್ಯರ ಬಳಿ ತೆರಳಿ ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಮರೆಯದಿರಿ


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...