Kannada Duniya

ಗರ್ಭಾವಸ್ಥೆಯ ಬಳಿಕ ತೂಕ ಹೆಚ್ಚಾಗುವುದನ್ನು ತಡೆಯಲು ಈ ಕ್ರಮ ಪಾಲಿಸಿ

ಗರ್ಭಾವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಇದಕ್ಕೆ ಹಾರ್ಮೋನ್ ನಲ್ಲಾಗುವ ವ್ಯತ್ಯಾಸವೇ ಕಾರಣವಾಗಿದೆ. ಇದರಿಂದ ಮಹಿಳೆಯರ ದೇಹದ ಆಕಾರ ಕೆಡುತ್ತದೆ. ಹಾಗಾಗಿ ಈ ತೂಕವನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ.

ಸೆಲರಿ : ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ತಡೆಯಲು ಸೆಲರಿ ನೀರನ್ನು ಕುಡಿಯಿರಿ. ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗೇ ಹೆರಿಗೆಯ ನಂತರ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಒಂದು ಚಮಚ ಸೆಲರಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದಕ್ಕೆ ಉಪ್ಪು ಮತ್ತು ನಿಂಬೆರಸ ಬೆರೆಸಿ ಕುಡಿಯಿರಿ.

ದಾಲ್ಚಿನ್ನಿ ಮತ್ತು ಲವಂಗ : ಇವು ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಇದು ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಾಗಾಗಿ ಒಂದು ಲೋಟ ನೀರಿಗೆ 2 ಚಮಚ ಲವಂಗ ಮತ್ತು ದಾಲ್ಚಿನ್ನಿ ಪುಡಿಯನ್ನು ಮಿಕ್ಸ್ ಮಾಡಿ ಕುದಿಸಿ ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...