Kannada Duniya

Extra calcium for athletes: ಅಥ್ಲೆಟಿಕ್ ಮಹಿಳೆಯರಿಗೆ ಕ್ಯಾಲ್ಸಿಯಂ ಒದಗಿಸುವುದು ಹೇಗೆ..?

ಓಡುವ ಮಹಿಳೆಯರು ಅಂದರೆ ಅಥ್ಲೆಟಿಕ್ಸ್ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಬೇಕಾಗುತ್ತದೆ. ಇದನ್ನು ದೇಹಕ್ಕೆ ನೀಡುವುದು ಹೇಗೆ?

ಓಡುವುದರಿಂದ ಮೂಳೆಗಳ ಮೇಲೆ ಒತ್ತಡ ಹೆಚ್ಚುತ್ತದೆ. ಹಾಲು ಚೀಸ್ ಮೊಸರುಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂಗಳಿವೆ. ಕಿತ್ತಳೆ ಅಂಜೂರದಂತ ಹಣ್ಣುಗಳಲ್ಲಿ, ಸೋಯಾ ಬೀನ್ , ಎಲೆಕೋಸು ಮೊದಲಾದ ತರಕಾರಿಗಳು ಇದು ಸಾಕಷ್ಟಿದೆ. ಇದರ ಸೇವನೆಯಿಂದ ನೀವು ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಅನ್ನು ಪಡೆದುಕೊಳ್ಳಬಹುದು.

ಮೂವತ್ತು ವಯಸ್ಸಿನ ಬಳಿಕ ದೇಹ ಕ್ಯಾಲ್ಸಿಯಂ ಅನ್ನು ಸಂಗ್ರಹಿಸುವುದನ್ನು ನಿಲ್ಲಿಸಿ, ಇದ್ದುದನ್ನೇ ಖರ್ಚು ಮಾಡಲು ಆರಂಭಿಸುತ್ತದೆ. ಈ ಅವಧಿಯಲ್ಲಿ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಒದಗಿಸುವುದು ಬಹಳ ಮುಖ್ಯ.

ಸಲಾಡ್ ಸೇವನೆಯೊಂದಿಗೆ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿಲ್ಲ. ಏಕೆಂದರೆ ಸಲಾಡ್ ನಲ್ಲಿರುವ ಆಕ್ಸಾಲಿಕ್ ಆಮ್ಲವು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತದೆ. ಕೆಫೀನ್ ಕೂಡಾ ಇದೇ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಕ್ಯಾಲ್ಸಿಯಂ ಪೂರಕಗಳ ಸೇವನೆ ಬಳಿಕ ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ.

ಹೇನಿನ ಸಮಸ್ಯೆಗೆ ಮನೆಮದ್ದು…!

ತರಕಾರಿ, ಸೊಪ್ಪು ಹಾಗೂ ಹಣ್ಣುಗಳ ಮೂಲಕವೇ ದೇಹಕ್ಕೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ದೊರೆಯುತ್ತದೆ. ಹೀಗಿದ್ದು ಸಮಸ್ಯೆಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...