Kannada Duniya

ಫ್ರೂಟ್ ಮಿಲ್ಕ್ ಶೇಕ್ ಆರೋಗ್ಯಕ್ಕೆ ಒಳ್ಳೆಯದೇ?

ಹೆಚ್ಚಿನ ಜನರು ಫ್ರೂಟ್ಸ್ ಮಿಲ್ಕ್ ಶೇಕ್ ಕುಡಿಯಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ಆರೋಗ್ಯಕ್ಕೆ ಉತ್ತಮ ಎಂದು ಭಾವಿಸುತ್ತಾರೆ. ಮತ್ತು ಇದು ಬಹಳ ರುಚಿಕರವಾಗಿರುತ್ತದೆ. ಆದರೆ ತಜ್ಞರು ತಿಳಿಸಿದ ಪ್ರಕಾರ ಇದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ.

ಫ್ರೂಟ್ ಮಿಲ್ಕ್ ಶೇಕ್ ಆರೋಗ್ಯಕ್ಕೆ ಹಾನಿಕಾರಕವಂತೆ. ಅದರಲ್ಲೂ ಕಿತ್ತಳೆ, ದ್ರಾಕ್ಷಿ, ಪಪ್ಪಾಯ, ಕಲ್ಲಂಗಡಿ ಮುಂತಾದ ಹಣ್ಣುಗಳಿಂದ ತಯಾರಿಸಿದ ಮಿಲ್ಕ್ ಶೇಕ್ ಕುಡಿಯಬಾರದಂತೆ. ಯಾಕೆಂದರೆ ಇವುಗಳಲ್ಲಿ ವಿಟಮಿನ್ ಸಿ ಇರುತ್ತದೆ. ಇದು ಹಾಲಿನೊಂದಿಗೆ ಬೆರೆಸಿ ತಿಂದರೆ ಆರೋಗ್ಯ ಕೆಡುತ್ತದೆಯಂತೆ.

ಯಾಕೆಂದರೆ ವಿಟಮಿನ್ ಸಿ ಹಾಲಿನೊಂದಿಗೆ ಬೆರೆತಾಗ ಅದರಲ್ಲಿರುವ ಪ್ರೋಟೀನ್ ಒಡೆಯುತ್ತದೆಯಂತೆ. ಇದರಿಂದ ಹೊಟ್ಟೆಯಲ್ಲಿ ಆಮ್ಲೀಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಸೇಬು, ಸ್ಟ್ರಾಬೆರಿ ಅನಾನಸ್, ಪೇರಳೆ, ಮುಂತಾದ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನುಹಾಲಿನ ಉತ್ಪನ್ನಗಳೊಂದಿಗೆ ಬೆರೆಸಿ ಸೇವಿಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...