Kannada Duniya

ಈ ಸಮಸ್ಯೆ ಇರುವ ಪುರುಷರ ಕುಟುಂಬ ಸದಸ್ಯರಿಗೆ ಕ್ಯಾನ್ಸರ್ ಬರುವ ಅಪಾಯವಿದೆಯಂತೆ!

ಪುರುಷರು ಇಂದಿನ ದಿನಗಳಲ್ಲಿ ಹೆಚ್ಚು ಸಮಯ ಕೆಲಸದಲ್ಲೇ ಬ್ಯುಸಿಯಾಗಿರುತ್ತಾರೆ. ಇದರಿಂದ ಅವರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಇದನ್ನು ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ಮುಂದೆ ನಿಮ್ಮ ಕುಟುಂಬದವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿದೆಯಂತೆ.

ಇತ್ತೀಚೆಗೆ ನಡೆದ ಸಂಸೋಧನೆಯೊಂದರ ಪ್ರಕಾರ, ಯಾವ ಪುರುಷರಲ್ಲಿ ವೀರ್ಯದಲ್ಲಿ ಅಸ್ವಸ್ಥತೆ, ಕಡಿಮೆ ವೀರ್ಯಾಣ ಸಂಖ್ಯೆ, ವೀರ್ಯದಲ್ಲಿ ಅಡೆತಡೆಯಾಗಿ ಸಂತಾನೋತ್ಪತ್ತಿಯಲ್ಲಿ ಸಮಸ್ಯೆ ಕಂಡುಬರುತ್ತದೆಯೋ ಆ ವ್ಯಕ್ತಿಯ ಕುಟುಂಬದಲ್ಲಿರುವ ಮುಂದಿನ ಪೀಳಿಗೆಯ ಪುರುಷರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ.

ಅಧ್ಯಯನದ ಪ್ರಕಾರ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಪ್ರತಿ ಮಿಲಿಗೆ 15 ಮಿಲಿಯನ್ ವೀರ್ಯವನ್ನು ಹೊಂದಿರಬೇಕಂತೆ. ಇದರಲ್ಲಿ ಕಡಿಮೆಯಾದರೆ ಅವರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ ಮತ್ತು ಇವರ ಮುಂದಿನ ಪೀಳಿಗೆಯವರಲ್ಲಿ ಕ್ಯಾನ್ಸರ್ ಅಪಾಯ ಕಂಡುಬರುತ್ತದೆ ಎಂಬುದಾಗಿ ತಿಳಿದುಬಂದಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...