Kannada Duniya

ಎಕ್ಸ್ ಪರಿ ಡೇಟ್ ಆದ ಮಸಾಲೆ ಪುಡಿಗಳನ್ನು ಬಳಸಿದರೆ ಈ ಸಮಸ್ಯೆಗೆ ಒಳಗಾಗುತ್ತೀರಂತೆ ಹುಷಾರು!

ಅಡುಗೆಯನ್ನು ತಯಾರಿಸುವಾಗ ಮಸಾಲೆ ಪುಡಿಗಳನ್ನು ಬಳಸುತ್ತೇವೆ. ಇದರಿಂದ ಅಡುಗೆಯ ರುಚಿ, ಪರಿಮಳ ಹೆಚ್ಚಾಗುತ್ತದೆ. ಆದರೆ ಕೆಲವರು ಈ ಪುಡಿಯನ್ನು ಮನೆಯಲ್ಲಿಯೇ ತಯಾರಿಸಿದರೆ ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಪುಡಿಗಳನ್ನು ಬಳಸುತ್ತಾರೆ. ಆದರೆ ಎಕ್ಸ್ ಪರಿ ಡೇಟ್ ಆದ ಮಸಾಲೆ ಪುಡಿಗಳನ್ನು ಬಳಸಿದರೆ ಈ ಸಮಸ್ಯೆಗೆ ಒಳಗಾಗುತ್ತೀರಂತೆ.

ಎಕ್ಸ್ ಪರಿ ಡೇಟ್ ಆದ ಮಸಾಲೆ ಪುಡಿಗಳನ್ನು ಅಡುಗೆಗೆ ಬಳಸಿದರೆ ಹೊಟ್ಟೆನೋವು, ವಾಂತಿ ಅತಿಸಾರದಂತಹ ಸಮಸ್ಯೆಗಳು ಕಾಡುತ್ತದೆಯಂತೆ. ಅಲ್ಲದೇ ಇದು ಹೊಟ್ಟೆ ಉರಿಗೂ ಕಾರಣವಾಗುತ್ತದೆಯಂತೆ.

ಕೆಟ್ಟು ಹೋದ ಮಸಾಲೆ ಪುಡಿಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ಇದರಿಂದ ಗ್ಯಾಸ್ ಸಮಸ್ಯೆ ಕಾಡುತ್ತದೆಯಂತೆ. ಇದರಿಂದ ಹೊಟ್ಟೆ ಊದಿಕೊಳ್ಳುತ್ತದೆಯಂತೆ.

ಎಕ್ಸ್ ಪರಿ ಡೇಟ್ ಆದ ಮಸಾಲೆ ಪುಡಿಗಳನ್ನು ಬಳಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಕಾಡುತ್ತದೆಯಂತೆ. ಇದರಿಂದ ಬ್ಯಾಕ್ಟೀರಿಯಾ ಸೊಂಕು ಕೂಡ ಉಂಟಾಗುತ್ತದೆಯಂತೆ.

ಅಲ್ಲದೇ ಈ ಮಸಾಲೆ ಪುಡಿಗಳನ್ನು ಸೇವಿಸಿದರೆ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ. ಅಲ್ಲದೇ ಈಗಾಗಲೇ ಲಿವರ್ ಸಮಸ್ಯೆ ಇರುವವರಲ್ಲಿ ಲಿವರ್ ಹಾನಿಗೊಳಗಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...