Kannada Duniya

ಒಣ ಕೆಮ್ಮುವಿನಿಂದ ರಾತ್ರಿ ಮಲಗುವುದಕ್ಕೆ ಆಗುತ್ತಿಲ್ವಾ….? ಈ ಟಿಪ್ಸ್ ಟ್ರೈ ಮಾಡಿ

ಈ ಅವಧಿಯಲ್ಲಿ ಮಕ್ಕಳನ್ನು ಬಹುವಾಗಿ ಕಾಡುವ ಸಮಸ್ಯೆಗಳಲ್ಲಿ ಒಣಕೆಮ್ಮು ಕೂಡ ಒಂದು. ಇದು ಗಂಟಲಿನಲ್ಲಿ ಯಾವುದೇ ಕಫವನ್ನು ಹೊಂದದೆಯೂ ಮಕ್ಕಳಿಗೆ ಉಸಿರಾಟದ ಸಮಸ್ಯೆಯನ್ನು ತಂದೊಡುತ್ತದೆ. ಈ ಕೆಲವು ಮನೆಮದ್ದುಗಳಿಂದ ಒಣ ಕೆಮ್ಮಿನ ಸಮಸ್ಯೆಯನ್ನು ನಿವಾರಿಸಬಹುದು.

ರಾತ್ರಿ ಮಲಗುವ ಮುನ್ನ ಚಿಟಿಕೆ ಅರಿಶಿನ ಬೆರೆಸಿದ ಬೆಚ್ಚಗಿನ ಹಾಲನ್ನು ಮಕ್ಕಳಿಗೆ ಕುಡಿಯಲು ನೀಡಿ. ಇದು ಉಸಿರಾಟದ ಸಮಸ್ಯೆಯನ್ನು ದೂರ ಮಾಡಿ ಒಣ
ಕೆಮ್ಮಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ.

ತುಳಸಿ ದಳವನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಚಹಾ ರೂಪದಲ್ಲಿ ಮಕ್ಕಳಿಗೆ ಕುಡಿಯಲು ಕೊಡಿ. ಇಲ್ಲವಾದರೆ ತುಳಸಿ ಎಲೆಗಳನ್ನು ಜಗಿಯಲು ನೀಡಿ.
ಇದರಲ್ಲೂ ಹಲವು ಔಷಧಿಯ ಗುಣಗಳಿವೆ.

ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಜೇನನ್ನು ತಿನ್ನಿಸಿ. ಇದು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳನ್ನು ಶಮನಗೊಳಿಸುತ್ತದೆ.

ಲವಂಗ ಹಾಗೂ ಏಲಕ್ಕಿ ಬೆರೆಸಿರುವ ಮಸಾಲ ಚಹಾವನ್ನು ಮಕ್ಕಳಿಗೆ ಕುಡಿಯಲು ಕೊಡುವುದರಿಂದಲೂ ಒಣ ಕೆಮ್ಮಿಗೆ ಪರಿಹಾರ ದೊರೆಯುತ್ತದೆ. ಮನೆ
ಮದ್ದುಗಳನ್ನು ನೀಡಿಯೂ ಸಮಸ್ಯೆ ನಿಯಂತ್ರಣಕ್ಕೆ ಬರಲಿಲ್ಲ ಎಂದಾದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...