Kannada Duniya

ಈ ಆಹಾರಗಳನ್ನು ತಯಾರಿಸಿದ ತಕ್ಷಣ ತಿಂದರೆ ಒಳ್ಳೆಯದು, ಇಲ್ಲವಾದರೆ ವಿಷವಾಗುತ್ತದೆಯಂತೆ

ಕೆಲವರು ಆಹಾರವನ್ನು ತಯಾರಿಸಿ 2 ದಿನಗಳ ಕಾಲ ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಕೆಲವೊಂದು ಆಹಾರವನ್ನು ತಯಾರಿಸಿದ ತಕ್ಷಣ ಬಿಸಿಯಾಗಿ ಸೇವಿಸಬೇಕು. ಇಲ್ಲವಾದರೆ ಅದು ವಿಷವಾಗುತ್ತದೆ.

ತಜ್ಞರು ತಿಳಿಸಿದ ಪ್ರಕಾರ, ಮೊಟ್ಟೆಗಳನ್ನು ಬೇಯಿಸಿ ಸಿಪ್ಪೆ ಸುಲಿದ ತಕ್ಷಣ ಸೇವಿಸಬೇಕು. ಇಲ್ಲವಾದರೆ ಮೊಟ್ಟೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಮೊಟ್ಟೆಯ ಸಿಪ್ಪೆ ಅದನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ಹಾಗಾಗಿ ಸಿಪ್ಪೆ ತೆಗೆದ ಮೊಟ್ಟೆಗಳನ್ನು ಹೆಚ್ಚು ಹೊತ್ತು ಇಟ್ಟು ತಿನ್ನಬೇಡಿ.

ಮಾಂಸಗಳನ್ನು ಹಲವು ದಿನಗಳ ಕಾಲವಿಟ್ಟು ಸೇವಿಸಬೇಡಿ. ಇದರಲ್ಲಿ ಬ್ಯಾಕ್ಟೀರಿಯಾಗಳು ಬಹಳ ಬೇಗನೆ ಬೆಳಯುತ್ತದೆ. ಇದನ್ನು ಸೇವಿಸಿದರೆ ನಿಮ್ಮ ದೇಹ ಅನಾರೋಗ್ಯಕ್ಕೀಡಾಗುತ್ತದೆ.

ಹಾಗೇ ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ ತಕ್ಷಣ ತಿನ್ನಿ. ಇದನ್ನು ಹೆಚ್ಚು ಕಾಲ ಇಡಬೇಡಿ. ಯಾಕೆಂದರೆ ಇದರಲ್ಲಿ ಸಾಲ್ಮೊನೆಲ್ಲಾ ಮತ್ತು ಲಿಸ್ಟೇರಿಯಾದಂತಹ ರೋಗಕಾರಕ ಬ್ಯಾಕ್ಟೀರಿಯಾಗಳು ಹರಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...