Kannada Duniya

ಚಹಾ, ಕಾಫಿ ಬದಲಿಗೆ ಬೇರೆ ಏನನ್ನು ಕುಡಿಯುವುದು ಎಂಬ ಗೊಂದಲದಲ್ಲಿದ್ದೀರಾ…?

ಚಹಾ ಮತ್ತು ಕಾಫಿಗೆ ಎಡಿಕ್ಟ್ ಆಗಿಬಿಟ್ಟಿದ್ದೇನೆ. ಅದನ್ನು ಬಿಡಲು ಸಾಧ್ಯವೇ ಇಲ್ಲ ಎನ್ನುವವರು ಇಲ್ಲಿ ಕೇಳಿ. ಅತಿಯಾಗಿ ಚಹಾ ಅಥವಾ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ, ತಲೆನೋವುಗಳು ಕಾಣಿಸಿಕೊಳ್ಳಬಹುದು. ಹಾಗಿದ್ದರೆ ಈ ಚಟದಿಂದ ಹೊರ ಬರುವುದು ಹೇಗೆ? ಇನ್ನು ಇದನ್ನು ಬಿಟ್ಟು ಬೇರೆ ಏನು ಕುಡಿಯುವುದು ಎಂಬುವವರಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ!
ಕಾಫಿ ಮತ್ತು ಚಹಾ ಕುಡಿಯೋ ಹೊತ್ತಿಗೆ ಹಣ್ಣು ಅಥವಾ ತರಕಾರಿಗಳ ಸಲಾಡ್ ಸೇವಿಸಲು ಆರಂಭಿಸಿ.  ಈ ಹೊತ್ತಿನಲ್ಲಿ ವ್ಯಾಯಾಮ ಮಾಡಿ. ಇದರಿಂದ ದೇಹದಲ್ಲಿ ಆರೋಗ್ಯಕರ ಹಾರ್ಮೋನ್ ಗಳು ಬಿಡುಗಡೆಯಾಗುತ್ತದೆ.
ಕಾಫಿ ಕುಡಿಯಲೇ ಬೇಕು ಎಂದು ಮನಸ್ಸು ಹೇಳುತ್ತಿದ್ದರೆ ಒಂದು ಲೋಟ ಬೆಚ್ಚಗಿನ ನೀರು ಕುಡಿಯಿರಿ. ಇದು ಕೂಡ ನಿಮ್ಮ ಮೂಡನ್ನು ಫ್ರೆಶಾಗಿಸಬಲ್ಲದು.
ಚಹಾ ಕುಡಿದು ನಿದ್ದೆಯನ್ನು ಮುಂದೆ ಹಾಕುವ ಬದಲು ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆಯನ್ನು ತಪ್ಪಿಸದಿರಿ.
ಯೋಗ ಹಾಗೂ ಧ್ಯಾನಗಳ ಮೂಲಕ ಒತ್ತಡ ಹಾಗೂ ಆತಂಕವನ್ನು ನಿಯಂತ್ರಿಸಿ. ಒತ್ತಡ ನಿವಾರಣೆಗೂ ಚಹಾ ಕಾಫಿಯ ಮೊರೆ ಹೋಗುವುದನ್ನು ತಡೆಯಿರಿ.
ಅನಿವಾರ್ಯವಾದಾಗ ಅಥವಾ ದಿನಕ್ಕೆ ಒಂದರಿಂದ ಎರಡು ಕಪ್ ನಷ್ಟು ಮಾತ್ರ ಚಹಾ ಅಥವಾ ಕಾಫಿಯನ್ನು ಸೇವಿಸಿ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...