Kannada Duniya

ಆನ್ ಲೈನ್ ನಲ್ಲಿ ಖರೀದಿಸಿದ ಬಳಿಕ…ಈ ಕೆಲಸವನ್ನು ಮಾಡಿ….!

ಇದು ಆನ್ ಲೈನ್ ಖರೀದಿ ಕಾಲ. ನಿಮಗೆ ಬೇಕಾದ್ದೆಲ್ಲವೂ ಮನೆ ಬಾಗಿಲಿಗೆ ಬರುತ್ತದೆ. ಅದರಲ್ಲೂ ಉಡುಪುಗಳನ್ನು ಖರೀದಿಸಿದಾಗ ಸಿಕ್ಕ ಖುಷಿಗೆ ಅದನ್ನು ಧರಿಸುವ ಗಡಿಬಿಡಿಗೆ ಮುಂದಾಗಬೇಡಿ.

ಮಳಿಗೆಗಳಲ್ಲಿ ಉಡುಪು ಕೊಂಡಂತೆ ನೀವು ಆನ್ ಲೈನ್ ನಲ್ಲಿ ಕೊಂಡ ವಸ್ತ್ರವನ್ನೂ ಈ ಹಿಂದೆ ಇತರರು ಖರೀದಿ ಮಾಡಿರಬಹುದು. ಸೈಜ್ ಸರಿಯಾಗುವುದಿಲ್ಲ ಅಥವಾ ಇನ್ನಾವುದೋ ಕಾರಣಕ್ಕೆ ಅದನ್ನು ಹಿಂದಿರುಗಿಸಿರಬಹುದು. ಹಾಗಾಗಿ ಒಗೆಯದೆ ಬಟ್ಟೆ ಧರಿಸದಿರಿ.

ಉತ್ತಮವಾದ ಆಲೂಗಡ್ಡೆ ಖರೀದಿಸಲು ಈ ಟಿಪ್ಸ್ ಫಾಲೋ ಮಾಡಿ

ಟ್ರಯಲ್ ಮಾಡುವಾಗ ಅದು ನೆಲದ ಮೇಲೂ ಬಿದ್ದಿರಬಹುದು. ಆನ್ ಲೈನ್ ನಲ್ಲಿ ನೀವು ಖರೀದಿಸಿದ ಉಡುಪು ಅವರ ಸ್ಟಾಕ್ ರೂಮ್ ನಲ್ಲಿ ಯಾವ ಸ್ಥಿತಿಯಲ್ಲಿತ್ತು ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೆ ಒಗೆಯದೆ ಬಳಸಿದಿರಿ.

ಇನ್ನು ಕೊರಿಯರ್ ಮಾಡುವ ವೇಳೆಯೂ ಅದನ್ನು ನೆಲದಲ್ಲೇ ಹಾಕಿ ಸರಿಯಾಗಿ ಮಡಿಚಿರಬಹುದು. ಬಟ್ಟೆಯ ಬಣ್ಣ ಮಾಸದಿರಲಿ ಎಂಬ ಕಾರಣಕ್ಕೆ ಮೇಲ್ಭಾಗಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿರಬಹುದು.

 

Clothes bought online need to be washed before wearing for these reasons


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...