Kannada Duniya

ತೊಡೆಯ ಕೊಬ್ಬನ್ನು ಕರಗಿಸಲು ಈ ಯೋಗಾಸನ ಅಭ್ಯಾಸ ಮಾಡಿ

ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರ ತೊಡೆ, ಹೊಟ್ಟೆ, ಸೊಂಟದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ಅವರಿಗೆ ಕೆಲವು ಡ್ರೆಸ್ ಗಳನ್ನು ಧರಿಸಲು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ತೊಡೆಯ ಭಾಗದ ಕೊಬ್ಬನ್ನು ಕರಗಿಸಲು ಈ ಯೋಗಾಸನ ಅಭ್ಯಾಸ ಮಾಡಿ.

ಉತ್ಕಟಾಸನ: ನೀವು ನಿಂತುಕೊಂಡು ನಿಮ್ಮ ಕಾಲುಗಳು ಮತ್ತು ಸೊಂಟವನ್ನು ಅಗಲವಾಗಿಸಿ. ಅಂಗೈಗಳು ಪರಸ್ಪರ ಎದುರಾಗಿರುವಂತೆ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ. ಎರಡು ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಸಿಟ್ ಬ್ಯಾಕ್ ಸ್ಥಾನಕ್ಕೆ ಬನ್ನಿ. ಹಾಗೇ ಮಾಡುವಾಗ ನಿಮ್ಮ ಹಿಮ್ಮಡಿಯ ಮೇಲೆ ಹೆಚ್ಚಿನ ತೂಕವನ್ನು ಹಾಕಿ. ಇದನ್ನು 60ಸೆಕೆಂಡುಗಳ ಕಾಲ ಮಾಡಿ.

ವೃಕ್ಷಾಸನ : ನೆಟ್ಟಗೆ ನಿಂತುಕೊಳ್ಳಿ. ಕಾಲುಗಳ ನಡುವೆ ಒಂದು ಅಡಿ ಅಂತರವಿರಲಿ. ನಿಮ್ಮ ಎಡಗಾಲಿನ ಮೇಲೆ ದೇಹವನ್ನು ಸಮತೋಲನಗೊಳಿಸಿ ನಿಮ್ಮ ಬಲಗಾಲನ್ನು ಮೇಲಕ್ಕೆತ್ತಿ ನಿಮ್ಮ ಎಡ ತೊಡೆಯ ಒಳಭಾಗದಲ್ಲಿ ಇರಿಸಿ. ನಿಮ್ಮ ಎದೆಯ ಮಟ್ಟದಲ್ಲಿ ಪ್ರಾರ್ಥನೆ ಮಾಡುವಂತೆ ಅಂಗೈಗಳನ್ನು ಜೋಡಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...