Kannada Duniya

ಜೊಜೊಬಾ ಆಯಿಲ್ ಹೀಗೆ ಬಳಸಿ ಉಗುರುಗಳ ಆರೋಗ್ಯ ಕಾಪಾಡಿ

ನಿಮ್ಮ ಕೈಗಳ ಅಂದವನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಉಗುರುಗಳನ್ನು ಬೆಳೆಸುತ್ತಾರೆ. ಹಾಗೇ ಅದಕ್ಕೆ ಸರಿಯಾದ ಆಕಾರವನ್ನು ನೀಡಿ ನೈಲ್ ಪಾಲಿಶ್ ಅನ್ನು ಹಚ್ಚುತ್ತಾರೆ. ಇದು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಉಗುರುಗಳು ಉದ್ದವಾಗಿ ಬೆಳೆಯಲು ಜೊಜೊಬಾ ಆಯಿಲ್ ಬಳಸಿ.

ಜೊಜೊಬಾ ಆಯಿಲ್ ಉಗುರುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಮತ್ತು ಸತು, ತಾಮ್ರ ಮುಂತಾದ ಖನಿಜಗಳಿದ್ದು, ಇದು ಉಗುರುಗಳನ್ನು ಮಾಯಿಶ್ಚರೈಸ್ ಮಾಡುತ್ತದೆಯಂತೆ. ಇದು ಉಗುರುಗಳನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದ ಉಗುರುಗಳು ಗಟ್ಟಿಯಾಗುತ್ತದೆ. ಮತ್ತು ಇದು ಉಗುರುಗಳಿಗೆ ಶಿಲೀಂಧ್ರ ಸೋಂಕು ತಗುಲುವುದನ್ನು ತಪ್ಪಿಸುತ್ತದೆ.

ಹಾಗಾಗಿ ಉಗುರುಗಳ ಆರೋಗ್ಯಕ್ಕಾಗಿ ಜೊಜೊಬಾ ಆಯಿಲ್ ಅನ್ನು ಬಿಸಿ ಮಾಡಿ ಅದನ್ನು ಉಗುರುಗಳಿಗೆ ಹಚ್ಚಿ ಮಸಾಜ್ ಮಾಡಿ. ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಇದರಿಂದ ರಕ್ತಪರಿಚಲನೆ ಸರಾಗವಾಗಿ ಆಗಿ ಉಗುರುಗಳು ಆರೋಗ್ಯವಾಗಿರುತ್ತದೆ. ಇದನ್ನು ಇಡೀ ರಾತ್ರಿ ಬಿಟ್ಟು ಬೆಳಿಗ್ಗೆ ಸ್ವಚ್ಛಗೊಳಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...