Kannada Duniya

ಮಕ್ಕಳು ಸ್ಪಷ್ಟವಾಗಿ ಮಾತನಾಡದೇ ಇರಲು ಪೋಷಕರ ಈ ತಪ್ಪುಗಳೇ ಕಾರಣವಂತೆ

ಚಿಕ್ಕ ಮಗು ತಕ್ಷಣ ಮಾತನಾಡುವುದಿಲ್ಲ. ಅವರು 2-3 ವರ್ಷದ ನಂತರ ಮಾತನಾಡಲು ಕಲಿಯುತ್ತಾರೆ. ಆದರೆ ಕೆಲವು ಮಕ್ಕಳು 2-3 ವರ್ಷ ದಾಟಿದರೂ ಮಾತನಾಡುವುದಿಲ್ಲ. ಇದಕ್ಕೆ ಪೋಷಕರ ಈ ತಪ್ಪುಗಳೇ ಕಾರಣವಂತೆ. ಹಾಗಾಗಿ ಅದನ್ನು ಸರಿಪಡಿಸಿಕೊಳ್ಳಿ.

ಪೋಷಕರು ಮಕ್ಕಳಿಗೆ 6ತಿಂಗಳ ನಂತರ ಆಹಾರವನ್ನು ರುಬ್ಬಿ ನೀಡುತ್ತಾರೆ. ಆದರೆ ಮಕ್ಕಳು ಆಹಾರವನ್ನು ಕಚ್ಚಿ ಜಗಿದು ತಿನ್ನುವುದರಿಂದ ದವಡೆ ಸ್ನಾಯುಗಳು ಬೆಳೆಯುತ್ತದೆ. ಇಲ್ಲವಾದರೆ ಮಕ್ಕಳಿಗೆ ಮಾತನಾಡಲು ಕಷ್ಟವಾಗುತ್ತದೆ.

ಹಾಗೇ ಮಕ್ಕಳಿಗೆ ದ್ರವರೂಪದ ಆಹಾರವನ್ನು ನೀಡುವಾಗ ಸಿಪ್ಪರ್ ಕಪ್ ನಲ್ಲಿ ನೀಡುತ್ತಾರೆ. ಆದರೆ ಅವರಿಗೆ ಗ್ಲಾಸ್ ನಲ್ಲಿ ಕುಡಿಯುವ ಅಭ್ಯಾಸ ಮಾಡಿಸಬೇಕು.ಇದು ಅವರಿಗೆ ಮಾತನಾಡಲು ಸಹಾಯ ಮಾಡುತ್ತದೆ.

ಹಾಗೇ ಮಗುವಿನ ಬಾಯಿಗೆ ಆಹಾರ ಅಂಟಿಕೊಂಡಾಗ ಅದನ್ನು ತಾಯಂದಿರು ಸ್ವಚ್ಛ ಮಾಡುತ್ತಾರೆ. ಅದರ ಬದಲು ಮಗುವಿಗೆ ನಾಲಿಗೆ ಅಥವಾ ತುಟಿಯನ್ನು ಬಳಸಿ ಸ್ವಚ್ಛಮಾಡಿಕೊಳ್ಳಲು ತಿಳಿಸಬೇಕು. ಇದು ಅವರು ಮಾತನಾಡಲು ಸಹಾಯ ಮಾಡುತ್ತದೆ.

ಹಾಗೇ ಮಕ್ಕಳಿಗೆ ಹೆಚ್ಚು ಹೊತ್ತು ಮೊಬೈಲ್ ಅನ್ನು ನೀಡಬಾರದು. ಇದರಿಂದ ಅವರು ಮಾತನಾಡುವುದನ್ನು ಮರೆತು ಬಿಡುತ್ತಾರೆ. ಹಾಗಾಗಿ ಅವರಿಗೆ ಟಿವಿ ನೋಡಲು ಹೇಳಿ, ನಂತರ ಅವರ ಜೊತೆ ನೀವು ಕುಳಿತು ಮಾತನಾಡಿಸುತ್ತಿರಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...