Kannada Duniya

ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವುದು ಹೇಗೆ….?

ಹಿಮೋಗ್ಲೋಬಿನ್ ಕೊರತೆಯಿಂದ ಹೆಚ್ಚಿನ ಮಂದಿ ಬಳಲುತ್ತಿರುತ್ತಾರೆ. ಇದು ಕೆಂಪು ರಕ್ತಕಣಗಳಲ್ಲಿರುವ ಪ್ರೋಟೀನ್ ಅಂಶವಾಗಿದ್ದು ಅಂಗ ಮತ್ತು ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುತ್ತದೆ. ಇದರ ಕೊರತೆಯಾದಾಗ ದೇಹಕ್ಕೆ ವಿಪರೀತ ಸುಸ್ತು ಕಾಡುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರೇ ಹೆಚ್ಚಿನ ಬಾರಿ ಹಿಮೋಗ್ಲೋಬಿನ್ ಕೊರತೆಯ ಸಮಸ್ಯೆಗೆ ಒಳಗಾಗುತ್ತಾರೆ ಎಂಬುದನ್ನು ಅಧ್ಯಯನ ಒಂದು ಬಹಿರಂಗಪಡಿಸಿದೆ.

ಇದರ ನಿವಾರಣೆಗೆ ವೈದ್ಯರು ಕಬ್ಬಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಲು ಸಲಹೆ ನೀಡುತ್ತಾರೆ. ಕಬ್ಬಿಣ ಅಂಶ ಹೇರಳವಾಗಿರುವ ಸೊಪ್ಪುಗಳ ಸೇವನೆಯಿಂದ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚುತ್ತದೆ. ಪರಿಣಾಮ ಹೀಮೋಗ್ಲೋಬಿನ್ ಪ್ರಮಾಣದಲ್ಲೂ ಏರಿಕೆಯಾಗುತ್ತದೆ. ಖರ್ಜೂರವನ್ನು ಸೇವಿಸುವುದರಿಂದಲೂ ಇದರ ಪ್ರಮಾಣವನ್ನು ಹೆಚ್ಚಿಸಬಹುದು. ಖರ್ಜೂರದಲ್ಲಿ ವಿಟಮಿನ್ ಸಿ ಮತ್ತು ಪೋಲಿಕ್ ಆಸಿಡ್ ಅಂಶ ಇರುವುದರಿಂದ ಇದು ದೇಹಕ್ಕೆ ಸಾಕಷ್ಟು ಪ್ರಮಾಣದ ಕಬ್ಬಿನಾಂಶವನ್ನು ಒದಗಿಸುತ್ತದೆ.

ದೇಹವು ಈ ಚಿಹ್ನೆಗಳನ್ನು ನೀಡಲು ಪ್ರಾರಂಭಿಸಿದರೆ ಎಚ್ಚರವಾಗಿರಿ,ಆಲ್ಕೋಹಾಲ್ ನಿಂದ ಶಾಶ್ವತವಾಗಿ ದೂರವಿರಿ…!

ಒಣ ದ್ರಾಕ್ಷಿಯಲ್ಲಿ ಕಬ್ಬಿಣಾಂಶ ಹಾಗೂ ತಾಮ್ರದ ಅಂಶ ಸಾಕಷ್ಟಿದೆ. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಹಾಗೂ ರಕ್ತಹೀನತೆ ಯಾಗುವುದನ್ನು ತಡೆಯುತ್ತದೆ. ರಾಗಿಯ ಸೇವನೆಯಿಂದಲೂ ಇದೇ ಲಾಭವನ್ನು ಪಡೆಯಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...