Kannada Duniya

ಸೈನಸ್ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ….!

ಹಲವು ಮಂದಿ ತಮಗೆ ಸೈನಸ್ ಸಮಸ್ಯೆ ಇದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ಸೈನಸ್ ಎಂದರೇನು?

ಇವು ಮೂಗಿನ ಎರಡು ಬದಿಗಳಲ್ಲಿ ಗಾಳಿಯಿಂದ ತುಂಬಿರುವ ಸೂಕ್ಷ್ಮ ಜೀವಕೋಶಗಳ ಕುಳಿಗಳು. ಶೀತ, ಅಲರ್ಜಿ ಇಲ್ಲವೇ ಬ್ಯಾಕ್ಟೀರಿಯಾಗಳಿಂದಾಗಿ ಇವು ಮುಚ್ಚಿ ಹೋಗುತ್ತವೆ. ಆಗ ವಿಪರೀತ ತಲೆನೋವು ಹಾಗೂ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸೈನಸ್ ಸಮಸ್ಯೆ ಇರುವವರು ತಲೆನೋವು ಎಂದು ದೂರುತ್ತಿರುತ್ತಾರೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಈ ಸಮಸ್ಯೆಯ ಲಕ್ಷಣಗಳು ಹೆಚ್ಚು. ವಾಸನೆ ತಿಳಿಯದೆ ಹೋಗುವುದು, ವಿಪರೀತ ಆಯಾಸ, ಕೆಮ್ಮು ಇದರ ಸಾಮಾನ್ಯ ಲಕ್ಷಣ. ಇದು ಒಮ್ಮೆ ಕಾಣಿಸಿಕೊಂಡರೆ ಎರಡರಿಂದ ಮೂರು ದಿನ ತಲೆ ಎತ್ತಲೂ ಆಗದಷ್ಟು ನೋವಿರುತ್ತದೆ. ಎದ್ದು ಓಡಾಡುವುದೂ ಅಸಾಧ್ಯವಾಗುತ್ತದೆ.

Yoga for acidity: ಆಮ್ಲೀಯತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಈ ಯೋಗಾಸನಗಳನ್ನು ಪ್ರಯತ್ನಿಸಿ…!

ಇದಕ್ಕೆ ಮಾತ್ರೆಗಳ ಜೊತೆ ಮನೆಯಲ್ಲೇ ಕೆಲವು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಮುಖ್ಯ. ಈ ಸಮಸ್ಯೆ ಇರುವವರು ಸಕ್ಕರೆ ಹಾಕದ ಬೆಚ್ಚಗಿನ ಪಾನೀಯಗಳನ್ನು ಆಗಾಗ ಕುಡಿಯುತ್ತಿರಬೇಕು. ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು.

ವಜ್ರಾಸನ, ಹಾಲಾಸನ, ಸರ್ವಾಂಗಾಸನ, ಪಾದಹಸ್ತಾಸನ ಮತ್ತಿತರ ಕೆಲವು ಆಸನಗಳಿಂದಲೂ ಈ ಸಮಸ್ಯೆಗೆ ಮುಕ್ತಿ ಹಾಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...