Kannada Duniya

ವೃದ್ಯಾಪ್ಯದಲ್ಲಿ ನಿದ್ರೆ ಬರುತ್ತಿಲ್ಲವೇ? ಪರಿಹಾರವೇನು…?

ವೃದ್ಯಾಪ್ಯದಲ್ಲಿ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ನಿದ್ರೆ ಮಾಡದೆ ಇರುವ ಕಾರಣಕ್ಕೆ ಅವರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಅವರ ಜೀವಿತಾವಧಿಯನ್ನೂ ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ಅಧ್ಯಯನವೊಂದು ನಿದ್ರೆ ಹಾಗೂ ಎಚ್ಚರ ಸ್ಥಿತಿಯನ್ನು ನಿಯಂತ್ರಿಸುವ ಮೆದುಳಿನ ಕೆಲವು ಭಾಗಗಳು ವಯಸ್ಸಾದಂತೆ ದುರ್ಬಲಗೊಳ್ಳುತ್ತದೆ ಎಂಬುದನ್ನು ಗುರುತಿಸಿದ್ದಾರೆ. ಇದಕ್ಕೆ ಪರಿಹಾರವೆಂದರೆ ಔಷಧಗಳನ್ನು ತೆಗೆದುಕೊಳ್ಳುವುದೇ ಆಗಿದೆ ಎಂದಿದೆ ಈ ಅಧ್ಯಯನ.

ಅದರೊಂದಿಗೆ ಉತ್ತಮ ನಿದ್ರೆ ಮಾಡಲು ವಾಕಿಂಗ್, ಲಘು ವ್ಯಾಯಾಮಗಳು ನೆರವಾಗಬಲ್ಲವು. ಮಧ್ಯಾಹ್ನ ಊಟವಾದ ಬಳಿಕ ನಿದ್ರೆ ಮಾಡುವುದನ್ನು ತಪ್ಪಿಸುವುದರಿಂದ ರಾತ್ರಿ ವೇಳೆ ಗಾಢ ನಿದ್ದೆ ಪಡೆಯಬಹುದು.

ಹಗಲಿನ ಹೊತ್ತು ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳಿ. ಅದು ಗಾರ್ಡನಿಂಗ್ ಇರಬಹುದು ಇಲ್ಲವೇ ನಿಮಗಿಷ್ಟದ ಯಾವುದೇ ಹವ್ಯಾಸವಿರಬಹುದು. ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡು ಹಗಲಿನ ಹೊತ್ತು ಆ್ಯಕ್ಟಿವ್ ಆಗಿರಿ.

Drinking water at night: ರಾತ್ರಿಯ ವೇಳೆ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ…?

ಮನಸ್ಸಿನಿಂದ ಚಿಂತೆಯನ್ನು ದೂರವಿಡಿ. ಉತ್ತಮ ಆಹಾರ ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಸಂಜೆಯ ಬಳಿಕ ಹೆಚ್ಚು ದ್ರವಾಹಾರ ಸೇವಿಸುವುದನ್ನು ತಪ್ಪಿಸಿ. ಇದರಿಂದ ಉತ್ತಮ ಆರೋಗ್ಯ ಹಾಗೂ ನಿದ್ರೆ ನಿಮ್ಮನ್ನಾವರಿಸುವುದು ನಿಶ್ಚಿತ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...