Kannada Duniya

ಬಿಳಿ ಮುಟ್ಟಿನಿಂದಾಗುವ ಸಮಸ್ಯೆಯನ್ನು ಹೋಗಲಾಡಿಸಲು ಈ ಪರಿಹಾರ ಮಾಡಿ….!

 

ಸಾಮಾನ್ಯವಾಗಿ ಮಹಿಳೆಯರಿಗೆ ಬಿಳಿ ಮುಟ್ಟಿನ ಸಮಸ್ಯೆಗಳು ಕಾಡುತ್ತದೆ. ಇದರಿಂದ ಅವರ ಜನನಾಂಗಗಳಲ್ಲಿ ಸುಡುವ ವೇಧನೆ, ತುರಿಕೆ ಕಂಡುಬರುತ್ತದೆ. ಅದು ಅವರಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ದಾಳಿಂಬೆಯನ್ನು ಹೀಗೆ ಬಳಸಿ.

ಅತಿಯಾದ ಬಿಳಿ ಮುಟ್ಟು ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ತುರಿಕೆ ಉಂಟಾಗುತ್ತದೆ. ಇದು ಕೆಲವೊಮ್ಮೆ ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ಅಂತವರು ದಾಳಿಂಬೆ ಹಣ‍್ಣುಗಳನ್ನು ಸೇವಿಸಿ. ಇಲ್ಲವಾದರೆ ದಾಳಿಂಬೆ ಎಲೆಗಳನ್ನು ಪುಡಿ ಮಾಡಿ ನೀರಿನಲ್ಲಿ ಕುದಿಸಿ ಸೇವಿಸಿ. ಇದರಿಂದ ಬಿಳಿ ಮುಟ್ಟು ಕಡಿಮೆಯಾಗುತ್ತದೆ.

ಹಾಗೇ ಪೇರಳೆ ಎಲೆಗಳಲ್ಲಿ ಬಿಳಿ ಮುಟ್ಟಿನ ಸಮಸ್ಯೆಯನ್ನು ಹೋಗಲಾಡಿಸುವ ಅಂಶವಿದೆ. ಹಾಗಾಗಿ ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿ. ಇದನ್ನು ದಿನಕ್ಕೆ 2 ಬಾರಿ ಸೇವಿಸಿ.

ಕೂದಲುದುರುವುದನ್ನು ತಡೆಯಲು ತೆಂಗಿನೆಣ್ಣೆಯ ಜೊತೆಗೆ ಇದನ್ನು ಬೆರೆಸಿ ಸೇವಿಸಿ….!

ಅಲ್ಲದೇ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಬಿಳಿ ಮುಟ್ಟಿನ ವಿಸರ್ಜನೆಯನ್ನು ಕಡಿಮೆಮಾಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...