Kannada Duniya

ಬಿಳಿ ಕೂದಲನ್ನು ಕೀಳುವುದರಿಂದ ಎಲ್ಲಾ ಕೂದಲು ಬಿಳಿಯಾಗುತ್ತದೆಯೇ?

ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ತಲೆಯಲ್ಲಿ ಹೆಚ್ಚಿನ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ನಾವು ಬಿಳಿ ಕೂದಲನ್ನು ಕೀಳುವುದೇ ಕಾರಣ ಎಂಬುದು ಹಲವರ ನಂಬಿಕೆ. ಇದು ನಿಜವೇ? ಎಂಬುದನ್ನು ತಿಳಿಯಿರಿ.

ಕೂದಲಿನ ಬುಡದಲ್ಲಿ ಕಿರುಚೀಲಗಳು ಕಂಡುಬರುತ್ತದೆ. ಇದರ ಸುತ್ತಲೂ ಮೆಲನೊಸೈಟ್ ಗಳು ಕಂಡುಬರುತ್ತದೆ. ಇದು ಮೆಲನಿನ್ ಅಂಶವನ್ನು ಉತ್ಪಾದಿಸುತ್ತದೆ.

ಈ ಮೆಲನಿನ್ ಕೂದಲು ಕಪ್ಪಾಗಿರಲು ಸಹಾಯ ಮಾಡುತ್ತದೆ. ಮೆಲನಿನ್ ಉತ್ಪಾದನೆ ಕಡಿಮೆಯಾದರೆ ಕೂದಲು ಬೆಳ್ಳಗಾಗುತ್ತದೆ. ಇದಕ್ಕೆ ನಮ್ಮ ವಯಸ್ಸು, ಒತ್ತಡ, ಕೆಟ್ಟ ಆಹಾರ ಪದ್ಧತಿ, ರಾಸಾಯನಿಕಗಳ ಅತಿಯಾದ ಬಳಕೆ ಕಾರಣವಾಗಿದೆ.

ಆದರೆ ತಜ್ಞರು ತಿಳಿಸಿದ ಪ್ರಕಾರ ಬಿಳಿ ಕೂದಲನ್ನು ಕೀಳುವುದರಿಂದ ನಿಮ್ಮ ಕೂದಲು ಬೆಳ್ಳಗಾಗುತ್ತದೆ ಎಂಬುದು ತಪ್ಪು ಕಲ್ಪನೆಯಂತೆ. ಕೂದಲನ್ನು ಕೀಳುವುದು ಮತ್ತು ಮೆಲನಿನ್ ಉತ್ಪಾದನೆಗೆ ಯಾವುದೇ ಸಂಬಂಧವಿಲ್ಲ. ಆದರೆ ಬಿಳಿ ಕೂದಲನ್ನು ಕಿತ್ತ ಜಾಗದಲ್ಲಿ ಮತ್ತೆ ಬಿಳಿ ಕೂದಲೇ ಹುಟ್ಟುತ್ತದೆ ಎಂದು ತಿಳಿಸಿದ್ದಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...