Kannada Duniya

ಪ್ರಯಾಣದ ಸಮಯದಲ್ಲಿ ವಾಂತಿಯಾಗುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ

ಕೆಲವರಿಗೆ ದೂರದ ಪ್ರಯಾಣವೆಂದರೆ ತುಂಬಾ ಇಷ್ಟ. ಆದರೆ ದೂರದ ಪ್ರಯಾಣ ಬೆಳೆಸಿದಾಗ ಅವರಿಗೆ ವಾಕರಿಕೆ, ವಾಂತಿ ಉಂಟಾಗುತ್ತದೆ. ಇದರಿಂದ ಅವರಿಗೆ ಪ್ರಯಾಣದ ಖುಷಿಯನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರಯಾಣದ ಸಮಯದಲ್ಲಿ ವಾಂತಿಯಾಗುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ.

ನಿಮಗೆ ಪ್ರಯಾಣದ ಸಮಯದಲ್ಲಿ ವಾಂತಿ ಸಮಸ್ಯೆ ಇದ್ದರೆ ಹೆಚ್ಚು ಸಮಯ ಕಿಟಕಿಯಿಂದ ಹೊರೆಗೆ ನೋಡಬೇಡಿ. ಇದು ನರಮಂಡಲವನ್ನು ಗೊಂದಲಗೊಳಿಸುತ್ತದೆ. ಇದು ವಾಂತಿಗೆ ಕಾರಣವಾಗುತ್ತದೆ.

ಪ್ರಯಾಣದ ಸಮಯದಲ್ಲಿ ಅತಿಯಾಗಿ ಆಹಾರವನ್ನು ಸೇವಿಸಬೇಡಿ. ಇದರಿಂದ ವಾಂತಿಯಾಗುತ್ತದೆ. ಹಾಗಾಗಿ ಹಣ್ಣಿನ ರಸವನ್ನು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ ಮತ್ತು ಬೇಗ ಜೀರ್ಣವಾಗುತ್ತದೆ.

ಹಾಗೇ ವಾಂತಿ ಸಮಸ್ಯೆ ಇರುವವರು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಬೇಡಿ. ಯಾಕೆಂದರೆ ಹಿಂದಿನ ಸೀಟಿನಲ್ಲಿ ಹೆಚ್ಚು ಜಂಪ್ ಆಗುವುದರಿಂದ ನಿಮಗೆ ವಾಂತಿಯಾಗಬಹುದು.

ಅಲ್ಲದೇ ವಾಂತಿ ಸಮಸ್ಯೆ ಇರುವವರು ನಿಂಬೆ ಪಾನಕ, ಅಡುಗೆ ಸೋಡಾವನ್ನು ಸೇವಿಸಿ. ಇದು ನಿಮ್ಮ ಮೂಡ್ ಅನ್ನು ರಿಫ್ರೆಶ್ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...