Kannada Duniya

ಪುರುಷರು ತಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಕಡ್ಡಾಯವಾಗಿ ಸೇವಿಸಬೇಕು….!

ವಯಸ್ಸು 40ರ ಗಡಿ ದಾಟುತ್ತಲೇ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಈ ಅವಧಿಯಲ್ಲಿ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ವಯಸ್ಸು ನಲ್ವತ್ತರ ಗಡಿ ದಾಟಿದ ಬಳಿಕ ಪುರುಷರು ತಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಕಡ್ಡಾಯವಾಗಿ ಸೇವಿಸಬೇಕು.

ಫೈಬರ್ ಯುಕ್ತ ಆಹಾರಗಳನ್ನು ಹೆಚ್ಚಿಗೆ ಸೇವಿಸಿ ಇದರಿಂದ ಅಜೀರ್ಣ ಮಲಬದ್ಧತೆ ಅಂತ ಸಮಸ್ಯೆಗಳಿಂದ ದೂರವಿರಬಹುದು. ಒಣ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ನಿಮಗೆ ಫೈಬರ್ ಅಂಶವನ್ನು ಒದಗಿಸುತ್ತವೆ.

ದೇಹಕ್ಕೆ ಅಗತ್ಯವಿರುವ ಗುಡ್ ಕೊಲೆಸ್ಟ್ರಾಲ್ ಅಂಶಗಳಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಅವಕಾಡೋ ಹಣ್ಣುಗಳು ಹಾಗೂ ಹಲವು ಬಗೆ ನಟ್ಸ್ ಗಳು ನಿಮಗೆ ಇದನ್ನು ಒದಗಿಸುತ್ತವೆ. ಇದರಿಂದ ಕೊಲೆಸ್ಟ್ರಾಲ್ ಸಮಸ್ಯೆಯನ್ನು ದೂರವಿರುವುದು ಸಾಧ್ಯವಾಗುತ್ತದೆ.

40 ವರ್ಷದ ನಂತರ ನಿಮ್ಮ ಪ್ರೀತಿಯ ಜೀವನವನ್ನು ಉತ್ತಮವಾಗಿಸಲು ಈ ಸಲಹೆ ಪಾಲಿಸಿ….!

ಓಟ್ಸ್ ಅಥವಾ ಕೆಂಪು ಅಕ್ಕಿಯ ಸೇವನೆಯಿಂದಲೂ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು.

ಆಹಾರದಲ್ಲಿ ಹಾಲು ಮೊಟ್ಟೆ ಚಿಕನ್ ಜೊತೆಗೆ ಪ್ರೋಟೀನ್ ಭರಿತ ತರಕಾರಿಗಳು, ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಹಲವು ಸಮಸ್ಯೆಗಳಿಂದ ದೂರವಿರಬಹುದು.

ವಯಸ್ಸು 40ರ ಗಡಿ ದಾಟಿದ ಬಳಿಕ ವಾಕಿಂಗ್ ಅಭ್ಯಾಸವನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಿ. ನಿತ್ಯ ನಿಯಮಿತ ವ್ಯಾಯಾಮ ಮಾಡಲು ಸಾಧ್ಯವಾಗದೇ ಹೋದರು ವಾಕಿಂಗ್ ಅನ್ನು ತಪ್ಪಿಸದಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...