Kannada Duniya

ಪಿರಿಯಡ್ಸ್ ನೋವು ಕಡಿಮೆಯಾಗಲು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿ

ಹೆಚ್ಚಿನ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವು ಕಾಡುತ್ತದೆ. ಇದರಿಂದ ಅವರಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಹಿಳೆಯರು ಈ ನೋವಿನಿಂದ ಪರಿಹಾರ ಪಡೆಯಲು ಈ ಸಲಹೆ ಪಾಲಿಸಿ.

ನೀವು ಪಿರಿಯಡ್ಸ್ ನೋವನ್ನು ನಿವಾರಿಸಲು ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿರುವ ನೀರಿನಲ್ಲಿ ತುಪ್ಪವನ್ನು ಬೆರೆಸಿ ಕುಡಿಯಿರಿ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

ಪಿರಿಯಡ್ಸ್ ನೋವು ಇದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಟೀ ಕುಡಿಯಿರಿ. ಶುಂಠಿಯಲ್ಲಿ ನೋವು ನಿವಾರಕ ಗುಣವಿದ್ದು, ಇದು ಹೊಟ್ಟೆಯ ಕೆಳಪದರದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮತ್ತು ಇದು ಹೊಟ್ಟೆಯ ಗ್ಯಾಸ್ ಮತ್ತು ಆ್ಯಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತದೆ.

ಹಾಗೇ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಮತ್ತು ಕೇಸರಿ ನೆನೆಸಿಟ್ಟ ನೀರನ್ನು ಕುಡಿಯಿರಿ. ಇದು ಮುಟ್ಟಿನ ನೋವಿನ ಜೊತೆಗೆ ಇತರ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...