Kannada Duniya

ಪಪ್ಪಾಯ ರಸವನ್ನು ಕುಡಿಯುವುದರಿಂದ ಪ್ಲೇಟ್ ಲೆಟ್ ಹೆಚ್ಚಾಗುವುದಲ್ಲದೇ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ….!

ದೇಹದಲ್ಲಿ ಪ್ಲೇಟ್ ನೆಟ್ ಸಂಖ್ಯೆ ಕಡಿಮೆಯಾದಾಗ ಪಪ್ಪಾಯ ರಸವನ್ನು ಕುಡಿಯಲು ಹೇಳುತ್ತಾರೆ. ಈ ಪಪ್ಪಾಯ ರಸದಲ್ಲಿ ಹಲವು ಔಷಧೀಯ ಗುಣಗಳಿವೆ. ಇದನ್ನು ಕುಡಿಯುವುದರಿಂದ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.

ಪಪ್ಪಾಯ ರಸ ದೇಹದಲ್ಲಿನ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ಮಧುಮೇಹ ಸಮಸ್ಯೆ ಕಾಡುವುದಿಲ್ಲ.

ಪಪ್ಪಾಯ ಎಲೆಯ ರಸವು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಇದ್ದು, ಇದು ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ.

ಪಪ್ಪಾಯ ಎಲೆಯ ರಸವು ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಪಪ್ಪಾಯ ರಸವು ರಕ್ತವನ್ನು ಶುದ್ಧಗೊಳಿಸುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಸಂಗ್ರಹವಾದ ಕೊಲೆಸ್ಟ್ರಾಲ್ ಕರಗುತ್ತದೆ. ಇದರಿಂದ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ.

ಕೀಟಗಳ ಕಡಿತದ ಸೆಳೆತವನ್ನು ದೂರಮಾಡಲು ಈ ಮನೆಮದ್ದನ್ನು ಹಚ್ಚಿ…..!

ಪಪ್ಪಾಯ ಎಲೆಗಳ ರಸ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಜೀರ್ಣಕ್ರಿಯೆಯ ಸಮಸ್ಯೆಯನ್ನುಂಟುಮಾಡುವಂತಹ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...