Kannada Duniya

ಕೀಟಗಳ ಕಡಿತದ ಸೆಳೆತವನ್ನು ದೂರಮಾಡಲು ಈ ಮನೆಮದ್ದನ್ನು ಹಚ್ಚಿ…..!

ಸೊಳ್ಳೆ, ಜೇಡ , ಜೇನು ಮುಂತಾದ ಕೀಟಗಳು ಕಡಿತಾಗ ದೇಹದ ಆ ಭಾಗ ಊದಿಕೊಳ್ಳುತ್ತದೆ. ಮತ್ತು ಅಲ್ಲಿ ನೋವು, ಸೆಳೆತ ಕಂಡುಬರುತ್ತದೆ. ಇದನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಅಂತವರು ಕೀಟಗಳ ಕಡಿತದ ಸೆಳೆತವನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ಕೀಟಗಳು ಕಡಿದ ಸ್ಥಳದಲ್ಲಿರುವ ವಿಷವನ್ನು ಹೊರಹಾಕಲು ಮೊದಲು ಆ ಸ್ಥಳವನ್ನು ಸಾಬೂನಿನಿಂದ ತೊಳೆಯಿರಿ.
ಹಾಗೇ ಕೀಟಗಳು ಕಡಿತ ಸ್ಥಳದಲ್ಲಿ ಊತ ಮತ್ತು ನೋವನ್ನು ನಿವಾರಿಸಲು ಅಡುಗೆ ಸೋಡಾಕ್ಕೆ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಪೀಡಿತ ಸ್ಥಳಕ್ಕೆ ಹಚ್ಚಿ. ಇದರಿಂದ ನೋವು ಊತ ಕಡಿಮೆಯಾಗುತ್ತದೆ.

ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಮುಖಕ್ಕೆ ಹಚ್ಚಬೇಡಿ…!

ಜೇನುತುಪ್ಪ ನೋವು ನಿವಾರಕ ಮತ್ತು ನಂಜುನಿವಾರಕ ಗುಣಗಳನ್ನು ಹೊಂದಿದೆ. ಇದು ಕೀಟಗಳ ಕಡಿತದ ನೋವನ್ನು ನಿವಾರಿಸುತ್ತದೆ. ಹಾಗಾಗಿ ಕೀಟ ಕಡಿದ ಸ್ಥಳಕ್ಕೆ ಜೇನುತುಪ್ಪ ಹಚ್ಚಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...