Kannada Duniya

ನೀವು ವೆರಿಕೋಸ್ ಸಮಸ್ಯೆಯಿಂದ ಬಳಲುತ್ತಿದ್ದೀರಾ…?

ಕೆಲವರ ದೇಹದ ಭಾಗಗಳಲ್ಲಿ ಉಬ್ಬಿರುವ ರಕ್ತನಾಳಗಳು (ವೆರಿಕೋಸ್ ) ಕಂಡು ಬರುತ್ತವೆ.ಇವು ದೇಹದಲ್ಲಿ ರಕ್ತದ ಹರಿವಿಗೆ ಅಡ್ಡಿಪಡಿಸುವುದರ ಜೊತೆಗೆ ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಾಗಿ ಕಾಲುಗಳಲ್ಲಿ ಕಂಡುಬರುವ ಈ ತೊಂದರೆ ಹೆಚ್ಚು ಹೊತ್ತು ನಿಲ್ಲುವುದರಿಂದ ಮತ್ತು ನಡೆಯುವುದರಿಂದ ಕಾಲಿನ ಸ್ನಾಯುಗಳ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಾಗುವುದರಿಂದ ಉಂಟಾಗುತ್ತದೆ.ಕೆಲವೊಂದು ವ್ಯಾಯಾಮ ಹಾಗೂ ಬದಲಾವಣೆಯ ಮೂಲಕ ಇದನ್ನು ಕಡಿಮೆ ಮಾಡಿಕೊಳ್ಳಬಹುದು.

ಹೆಚ್ಚುಹೊತ್ತು ನಿಂತುಕೊಳ್ಳುವ ಬದಲು ಸ್ವಲ್ಪ ನಡೆಯಿರಿ. ಇದರಿಂದ ರಕ್ತದ ಹರಿವು ಸರಿಯಾಗುತ್ತದೆ.ಅರ್ಧ ಗಂಟೆಗೊಮ್ಮೆ ನಡೆಯಿರಿ.
ವ್ಯಾಯಾಮ ಹಾಗೂ ನಡಿಗೆ ನಿಮ್ಮ ರಕ್ತದ ಚಲನೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ವೆರಿಕೋಸ್ ಸಮಸ್ಯೆಯನ್ನು ಕೂಡ ನಿವಾರಿಸಿಕೊಳ್ಳಬಹುದು.

ಇನ್ನು ಸೊಂಟದ ಸುತ್ತ ಅತೀ ಬಿಗಿಯಾದ ಉಡುಪನ್ನು ಧರಿಸಬೇಡಿ. ಇದು ಕೂಡ ವೆರಿಕೋಸ್ ಸಮಸ್ಯೆಗೆ ಕಾರಣವಾಗುತ್ತದೆ. ಹಾಗೇ ಹೈ ಹೀಲ್ಡ್ ಚಪ್ಪಲಿ ಧರಿಸಬಹುದರಿಂದ ಕೂಡ ಈ ಸಮಸ್ಯೆ ಉಲ್ಬಣವಾಗುತ್ತದೆಯಂತೆ.

ಅದಕ್ಕೇ 3 ರೊಟ್ಟಿಯನ್ನು ಒಟ್ಟಿಗೆ ತಟ್ಟೆಯಲ್ಲಿ ಬಡಿಸುವುದಿಲ್ಲ, ಕಾರಣವೇನು ಗೊತ್ತಾ…?

ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡಿ. ಅತೀಯಾದ ದೇಹ ತೂಕ ನರದ ಮೇಲೆ ಸಮಸ್ಯೆ ಬೀರುತ್ತದೆಯಂತೆ.
ಇನ್ನು ಉತ್ತಮವಾದ ಆಹಾರ ಪದ್ಧತಿಯಿಂದ ಕೂಡ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಇದೆಲ್ಲದರ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳುವುದು ಕೂಡ ಉತ್ತಮ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...