Kannada Duniya

ನಿಮಗೆ ಹಸಿವಾಗುತ್ತಿಲ್ಲವಾದರೆ ಇದನ್ನು ಸೇವಿಸಿ ನಿಮ್ಮ ಹಸಿವನ್ನು ಹೆಚ್ಚಿಸಿಕೊಳ್ಳಿ

ಹಸಿವಾದಾಗ ನಾವು ಆಹಾರವನ್ನು ಸೇವಿಸುತ್ತೇವೆ. ಇದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಆದರೆ ಕೆಲವರಿಗೆ ಹಸಿವಾಗುವುದಿಲ್ಲ. ಇದರಿಂದ ಅವರಿಗೆ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಅಂತವರು ತಮ್ಮ ಹಸಿವನ್ನು ಹೆಚ್ಚಿಸಲು ಇವುಗಳನ್ನು ಸೇವಿಸಿ.

ನಿಮಗೆ ತುಂಬಾ ಹಸಿವಾಗಬೇಕೆಂದರೆ ಪ್ರತಿದಿನ ಓಂಕಾಳಿನ ಕಷಾಯವನ್ನು ಸೇವಿಸಿ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮಗೆ ಹಸಿವಾಗುತ್ತದೆ.

ನಿಮ್ಮ ಹಸಿವನ್ನು ಹೆಚ್ಚಿಸಲು ಹುಣಸೆ ಹಣ್ಣಿನ ರಸವನ್ನು ಕುಡಿಯಿರಿ. ಇದು ಹಸಿವನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದ ದೌರ್ಬಲ್ಯವನ್ನು ದೂರಮಾಡುತ್ತದೆ.

ಕೊತ್ತಂಬರಿ ಸೊಪ್ಪಿನ ಸೇವನೆ ಮಾಡುವುದರಿಂದ ನಿಮ್ಮ ಹಸಿವನ್ನು ಹೆಚ್ಚಿಸಬಹುದು. ಇದು ನಿಮ್ಮ ದೇಹದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ನೀವು ತಿಂದ ಆಹಾರ ಜೀರ್ಣವಾದರೆ ನಿಮಗೆ ಮತ್ತೆ ಹಸಿವಾಗುತ್ತದೆ. ಹಾಗಾಗಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರಲು ಸೊಂಪು ಅಥವಾ ಜೀರಿಗೆ ಕಷಾಯಗಳನ್ನು ಸೇವಿಸಿ. ಇದು ಆಹಾರ ಬೇಗ ಜೀರ್ಣವಾಗಲು ಸಹಾಯ ಮಾಡುತ್ತವೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...