Kannada Duniya

ದೇಹದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸುವುದು ಹೇಗೆ….?

ಋತುಗಳು ಬದಲಾದಂತೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಅದಕ್ಕಾಗಿ ನೀವು ಆಮ್ಲಜನಕದ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಕೆಲವಷ್ಟು ಮನೆಯಲ್ಲೇ ಇರುವ ವಸ್ತುಗಳ ಮದ್ದುಗಳ ಮೂಲಕವೇ ಇದನ್ನು ಹೆಚ್ಚಿಸಿಕೊಳ್ಳಬಹುದು. ಅದು ಹೇಗೆಂದರೆ…

ದೇಹದ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ನಿಯಮಿತವಾಗಿ ನಿಂಬೆಹಣ್ಣನ್ನು ಬಳಸಿ.ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಯಕೃತ್ ನಿರ್ಮಿಷಗೊಳ್ಳುತ್ತದೆ. ಅನಗತ್ಯ ತ್ಯಾಜ್ಯ ದೇಹದಿಂದ ಹೊರಹಾಕಲ್ಪಡುತ್ತದೆ.

ಅದೇ ರೀತಿ ದ್ರಾಕ್ಷಿ ಹಣ್ಣಿನ ಸೇವನೆಯಿಂದಲೂ ಇದೇ ಲಾಭವನ್ನು ಪಡೆಯಬಹುದು. ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಹಾರ್ಮೋನ್ ಗಳ ಸಮತೋಲನ ವನ್ನು ನಿಯಂತ್ರಿಸುತ್ತದೆ. ಕಪ್ಪು ದ್ರಾಕ್ಷಿ ಸೇವನೆಯಿಂದ ರಕ್ತ ಪರಿಚಲನೆ ಸಮಸ್ಯೆಗಳು ಕಡಿಮೆಯಾಗುತ್ತದೆ.

Lemon Rasam Recipe:ಸುಲಭದಲ್ಲಿ ಮಾಡಿ ‘ಲಿಂಬೆಹಣ್ಣಿನ ರಸಂ’

ಅವಕಾಡೊ ಹಾಗೂ ಪಪ್ಪಾಯಿ ಹಣ್ಣಿನ ಸೇವನೆಯಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದನ್ನು ತಡೆಯಬಹುದು. ಹೊಟ್ಟೆಯ ಹಾಗೂ ಸಂಪೂರ್ಣ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಇವುಗಳ ಪಾತ್ರ ಮಹತ್ವದ್ದು.

ಪಾಲಕ್ ಅಥವಾ ಹರಿವೇ ಸೊಪ್ಪಿನ ನಿಯಮಿತ ಸೇವನೆಯಿಂದಲೂ ರಕ್ತವು ಯಾವುದೇ ಅಡೆತಡೆ ಇಲ್ಲದೆ ದೇಹದ ಎಲ್ಲಾ ಭಾಗಗಳಿಗೂ ಹರಿಯುತ್ತದೆ ಹಾಗೂ ಆಮ್ಲಜನಕದ ಮಟ್ಟವನ್ನು ಮೌಲ್ಯಯುತವಾಗಿ ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...