Kannada Duniya

ತೂಕ ಇಳಿಸಿಕೊಳ್ಳಲು ಪಾಲಕ್ ಅನ್ನು ಹೀಗೆ ಸೇವಿಸಿ

ಚಳಿಗಾಲದಲ್ಲಿ ತೂಕ ಹೆಚ್ಚಳ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ. ಹಾಗಾಗಿ ತೂಕವನ್ನು ಇಳಿಸಿಕೊಳ್ಳಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದರಂತೆ ನೀವು ತೂಕ ಇಳಿಸಿಕೊಳ್ಳಲು ಪಾಲಕ್ ಸೊಪ್ಪನ್ನು ಹೀಗೆ ಬಳಸಿ.

ಪಾಲಕ್ ಸೊಪ್ಪಿನಲ್ಲಿ ಸೋಡಿಯಂ, ಪೊಟ್ಯಾಶಿಯಂ, ಫೈಬರ್, ಪ್ರೋಟೀನ್, ವಿಟಮಿನ್ ಸಿ ನಂತಹ ಅನೇಕ ಪೋಷಕಾಂಶಗಳು ಕಂಡುಬರುತ್ತದೆ. ಇದು ದೇಹದ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಇದರಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇರುವ ಕಾರಣ ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಾಗಾಗಿ ಪಾಲಕ್ ಸೊಪ್ಪಿನಿಂದ ಸೂಪ್ ತಯಾರಿಸಿ ಕುಡಿಯಿರಿ. ಇದು ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ. ಅಲ್ಲದೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಾಲಕ್ ರಸವನ್ನು ಸೇವಿಸಿ. ಅಲ್ಲದೇ ಪಾಲಕ್ ಸೊಪ್ಪನ್ನು ಹಿಟ್ಟಿನಲ್ಲಿ ಮಿಕ್ಸ್ ಮಾಡಿ ರೊಟ್ಟಿ ತಯಾರಿಸಿ ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...