Kannada Duniya

ತೀವ್ರ ಜ್ವರ ಇದ್ದಾಗ ಈ ಕೆಲಸ ಮಾಡಬೇಡಿ!

ಜ್ವರವಿದ್ದಾಗ ಆಹಾರ ಮತ್ತು ವಿಶ್ರಾಂತಿಯ ಬಗ್ಗೆ ಹೆಚ್ಚು ಗಮನ ಕೊಡಬೇಕು. ಯಾಕೆಂದರೆ ಈ ಸಮಯದಲ್ಲಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇಲ್ಲವಾದರೆ ಅನಾರೋಗ್ಯ ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ತೀವ್ರ ಜ್ವರ ಇದ್ದಾಗ ಈ ಕೆಲಸ ಮಾಡಬೇಡಿ.

ಜ್ವರದ ಸಮಯದಲ್ಲಿ ತಣ್ಣೀರಿನಿಂದ ಸ್ನಾನ ಮಾಡಬೇಡಿ. ಜ್ವರವಿದ್ದಾಗ ಉಗುರುಬೆಚ್ಚಗಿರುವ ನೀರಿನಿಂದ ಸ್ನಾನ ಮಾಡಿ. ಸ್ನಾನ ಮಾಡಲು ಸಾಧ್ಯವಾಗದಿದ್ದರೆ 2-3 ದಿನಗಳ ಕಾಲ ಸ್ನಾನ ಮಾಡಬೇಡಿ.

ಜ್ವರವಿದ್ದಾಗ ಹಣ್ಣುಗಳನ್ನು ತಿನ್ನಬೇಡಿ. ಇದರಿಂದ ಜ್ವರ ಹೆಚ್ಚಾಗುತ್ತದೆ. ಹಾಗಾಗಿ ರಸಭರಿತ ಹಣ್ಣುಗಳು ಮತ್ತು ಹುಳಿ ಹಣ್ಣುಗಳು, ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಕಿತ್ತಳೆ, ನಿಂಬೆ ಹಣ್ಣನ್ನು ಸೇವಿಸಬೇಡಿ.

ಜ್ವರವಿದ್ದಾಗ ವ್ಯಾಯಾಮ ಮಾಡಬೇಡಿ. ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ದೇಹ ಮತ್ತಷ್ಟು ದುರ್ಬಲಗೊಳ್ಳುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...