Kannada Duniya

ಜೇನುತುಪ್ಪವನ್ನು ಈ ಪದಾರ್ಥಗಳೊಂದಿಗೆ ಬೆರೆಸಿ ತಿಂದರೆ ಬೇಗನೆ ತೂಕ ಕಳೆದುಕೊಳ್ಳಬಹುದು…!

ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ರೋಗಗಳಿಂದ ಕಾಪಾಡುತ್ತದೆ. ಮಾತ್ರವಲ್ಲ ಜೇನುತುಪ್ಪವನ್ನು ಬಳಸಿ ಹೆಚ್ಚುತ್ತಿರುವ ನಿಮ್ಮ ತೂಕವನ್ನು ಕೂಡ ಸುಲಭವಾಗಿ ಇಳಿಸಿಕೊಳ್ಳಬಹುದು. ಹಾಗಾಗಿ ಜೇನುತುಪ್ಪಕ್ಕೆ ಇವುಗಳನ್ನು ಬೆರೆಸಿ ಸೇವಿಸಿ.

ಜೇನುತುಪ್ಪ ಮತ್ತು ದಾಲ್ಚಿನ್ನಿ : ಇವೆರಡು ತೂಕ ಇಳಿಸಲು ಸಹಕಾರಿಯಾಗಿವೆ. ಹಾಗಾಗಿ ದಾಲ್ಚಿನ್ನಿಯ ಪುಡಿಗೆ ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ ನಂತರ ಗ್ರೀನ್ ಟೀ ಕುಡಿಯಿರಿ. ಇದರಿಂದ ಚಯಾಪಚಯ ಕ್ರಿಯೆ ವೇಗವಾಗುತ್ತದೆ, ನಿಮ್ಮ ದೇಹದ ಶಕ್ತಿ ಹೆಚ್ಚಾಗಿಸಿ ಹಸಿವಾಗುವುದನ್ನು ತಡೆಯುತ್ತದೆ.

Honey for hair problems: ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ…?

ಜೇನುತುಪ್ಪ ಮತ್ತು ಬೆಳ್ಳುಳ್ಳಿ : ಬೆಳಿಗ್ಗೆ ಜೇನುತುಪ್ಪದೊಂದಿಗೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ದೇಹದಲ್ಲಿರುವ ಕೊಬ್ಬುಗಳು ಕರಗುತ್ತದೆ. ಇದರಿಂದ ತೂಕ ಸುಲಭವಾಗಿ ಇಳಿಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...