Kannada Duniya

Honey for hair problems: ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ…?

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಜೇನುತುಪ್ಪ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೇನುತುಪ್ಪ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜೊತೆಗೆ ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೂದಲುದುರುವ ಸಮಸ್ಯೆಗೆ ಒಳಗಾದವರು ಜೇನುತುಪ್ಪಕ್ಕೆ ಇದನ್ನು ಮಿಕ್ಸ್ ಮಾಡಿ ಬಳಸಿ.

ಜೇನುತುಪ್ಪ ಬಳಸುವುದರಿಂದ ನೆತ್ತಿ ಆರೋಗ್ಯವಾಗಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗೇ ಇದು ತಲೆಹೊಟ್ಟನ್ನು ತೊಡೆದುಹಾಕುತ್ತದೆ. ಅಲ್ಲದೇ ಒಣ ಕೂದಲಿನ ಸಮಸ್ಯೆಯನ್ನು ಹೊಂದಿರುವವರು ಜೇನುತುಪ್ಪಕ್ಕೆ ಮೊಸರನ್ನು ಮಿಕ್ಸ್ ಮಾಡಿ ಬಳಸಿ. ಇದರಿಂದ ಕೂದಲು ತೇವಾಂಶದಿಂದ ಕೂಡಿರುತ್ತದೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ.

Papaya leaves for hair: ಪಪ್ಪಾಯ ರಸವನ್ನು ಕೂದಲಿಗೆ ಹಚ್ಚಿದರೆ ಏನಾಗುತ್ತದೆ ಗೊತ್ತಾ…?

ಹಾಗೇ ಸೀಳು ಕೂದಲಿಗೆ ಸಮಸ್ಯೆ ಇರುವವರು ಜೇನುತುಪ್ಪ ಮತ್ತು ಮೊಟ್ಟೆಯನ್ನು ಮಿಕ್ಸ್ ಮಾಡಿ ಹಚ್ಚಿ. ಇದು ಕೂದಲು ಕವಲೊಡೆಯುವುದನ್ನು ತಡೆಯುತ್ತದೆ. ಹಾಗೇ ಕೂದಲು ಉದ್ದವಾಗಿ ಬೆಳೆಯಲು ಜೇನುತುಪ್ಪ ಮತ್ತು ಅಲೋವೆರಾ ಲೋಳೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...