Kannada Duniya

ಚಳಿಗಾಲದಲ್ಲಿ ರಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ರಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು, ಇದು ದೇಹಕ್ಕೆ ಬೇಕಾದ ವಿಟಮಿನ್ ಗಳನ್ನು ಒದಗಿಸುತ್ತದೆ. ಆದರೆ ಚಳಿಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ಈ ಸಮಯದಲ್ಲಿ ರಾಗಿ ಸೇವಿಸಿದರೆ ಒಳ್ಳೆಯದೇ? ಎಂಬುದನ್ನು ತಿಳಿಯಿರಿ.

ಚಳಿಗಾಲದಲ್ಲಿ ರಾಗಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಶೀತ, ಜ್ವರದ ಸಮಸ್ಯೆ ಕಾಡುವುದಿಲ್ಲ.

ಇದರಲ್ಲಿ ವಿಟಮಿನ್ ಗಳು ಮತ್ತು ಖನಿಜಗಳು, ಫೈಬರ್ ಸಮೃದ್ಧವಾಗಿದೆ. ಇದು ನಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಸಹಾಯ ಮಾಡುತ್ತದೆ ಮತ್ತು ಇದನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.

ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ದೇಹದೊಳಗೆ ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.

ರಾಗಿಯಲ್ಲಿ ನಾರು ಮತ್ತು ಪ್ರೊಬಯಾಟಿಕ್ ಗಳು ಸಮೃದ್ಧವಾಗಿದ್ದು, ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...