Kannada Duniya

ಖಿನ್ನತೆಗೆ ಚಿಕಿತ್ಸೆಗಿಂತ ಯೋಗ ಉತ್ತಮವೇ….?

ಖಿನ್ನತೆಯು ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಇದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದು. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾದ್ದರಿಂದ ಇದನ್ನು ನಿರ್ಲಕ್ಷಿಸದೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ.

ಇತ್ತೀಚಿನ ವರ್ಷಗಳಲ್ಲಿ ಯೋಗವು ಹೆಚ್ಚು ಜನಪ್ರಿಯವಾಗುತ್ತಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಆದರೆ ವ್ಯಕ್ತಿ ಯಾವ ಕಾರಣಕ್ಕೆ ಖಿನ್ನನಾಗಿದ್ದಾರೆ ಎಂಬುದನ್ನು ತಿಳಿಯಲು ಚಿಕಿತ್ಸಾ ವಿಧಾನದ ಮೊರೆ ಹೋಗುವುದು ಅನಿವಾರ್ಯ.

ಆ ಬಳಿಕ ವ್ಯಕ್ತಿಗೆ ಟ್ರೀಟ್ ಮೆಂಟ್ ನೀಡುವ ಸಮಯದಲ್ಲಿ ಯೋಗವನ್ನು ಕಲಿಸುವುದು ಒಳ್ಳೆಯದು. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಒಟ್ಟಾರೆ ಯೋಗಕ್ಷೇಮ ಸುಧಾರಿಸುತ್ತದೆ. ಪ್ರತಿದಿನ ನಿಯಮಿತವಾಗಿ ಯೋಗ ಮಾಡುವುದರಿಂದ ಖಿನ್ನತೆಯ ಲಕ್ಷಣಗಳಾದ ಆಯಾಸವನ್ನು ಕಡಿಮೆ ಮಾಡಬಹುದು.

ಆರೋಗ್ಯಕರವಾದ ಹುರುಳಿಕಾಳು ಪಲ್ಯ ಮಾಡಿ ಸವಿಯಿರಿ….!

ಖಿನ್ನತೆಯನ್ನು ನಿವಾರಿಸಲು ಯೋಗ ಮತ್ತು ಚಿಕಿತ್ಸೆ ಎರಡೂ ಉತ್ತಮ ವಿಧಾನವಾಗಿದೆ. ಯೋಗವು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡಿದರೆ, ಚಿಕಿತ್ಸೆಯು ವ್ಯಕ್ತಿಯ ಸಮಸ್ಯೆಯ ಕಾರಣಗಳನ್ನು ತಿಳಿಸುತ್ತದೆ. ಖಿನ್ನತೆ ಅನುಭವಿಸುತ್ತಿರುವ ವ್ಯಕ್ತಿಗೆ ಮನೋಧೈರ್ಯದ ಅಗತ್ಯವಿರುತ್ತದೆ. ಈ ಸಮಯದಲ್ಲಿ ವ್ಯಕ್ತಿಯನ್ನು ಒಂಟಿಯಾಗಿ ಬಿಡದೆ ಧೈರ್ಯ ನೀಡುತ್ತಿರುವುದು ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...