Kannada Duniya

ಸಣ್ಣ ಪುಟ್ಟ ಖುಷಿಯನ್ನು ಆಚರಿಸಿ ನೋಡಿ!

ಗೆಲುವು ಸಣ್ಣದೇ ಆಗಿರಲಿ, ದೊಡ್ಡದೇ ಆಗಿರಲಿ, ಅದನ್ನು ಸಂಭ್ರಮಿಸಲು ಕಲಿತಾಗ ಬದುಕು ಸುಂದರವಾಗುತ್ತದೆ. ಹುಟ್ಟಿದ ಹಬ್ಬ, ಮದುವೆ ದಿನ, ಇತರ ಕಾರ್ಯಕ್ರಮಗಳ ಹೊರತಾಗಿಯೂ ಸಣ್ಣ ಪುಟ್ಟ ಖುಷಿಯನ್ನು ಹಂಚಿಕೊಳ್ಳುವುದರಿಂದ, ಸೆಲೆಬ್ರೇಟ್ ಮಾಡುವುದರಿಂದ  ಯಾವೆಲ್ಲ ಲಾಭಗಳಿವೆ ತಿಳಿಯೋಣ.

ಸೆಲೆಬ್ರೇಶನ್ ಮಾಡುವುದರಿಂದ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಮನೆಯಿಂದ ದೂರವಿದ್ದರೂ ವಾರಾಂತ್ಯಗಳಲ್ಲಿ ಮನೆಗೆ ಹಿಂದಿರುಗಿ ಮನೆಮಂದಿಯೊಂದಿಗೆ ಸೆಲೆಬ್ರೇಶನ್ ಮಾಡುವುದರಿಂದ ಅವರ ಹಾಗೂ ನಿಮ್ಮ ನಡುವಿನ ಅಂತರ ಕಡಿಮೆಯಾಗುತ್ತದೆ.

ನಿಮ್ಮ ಮಧ್ಯೆ ಅಂಡರ್ ಸ್ಟ್ಯಾಂಡಿಂಗ್ ಬೆಳೆಯುತ್ತದೆ. ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ, ಗೆಳೆಯರು ಹೀಗೆ ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ.

ಒಂಟಿತನ ದೂರವಾಗುತ್ತದೆ. ಖಿನ್ನತೆ ಅಥವಾ ಆತಂಕದಂತಹ ಸಮಸ್ಯೆಗಳು ನಿಮ್ಮಹತ್ತಿರಕ್ಕೂ ಸುಳಿಯುವುದಿಲ್ಲ. ಇದು ಎಲ್ಲರ ಮನಸ್ಸಿಗೆ ಖುಷಿ ತರುತ್ತದೆ. ಆಗ ಮನಸ್ಸು ಶಾಂತಸ್ಥಿತಿಗೆ ಬಂದು ಸಕಾರಾತ್ಮಕವಾಗಿ ಯೋಚಿಸಲು ಆರಂಭಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...