Kannada Duniya

ವ್ಯಕ್ತಿಯ ಧ್ವನಿಯು ಕಳೆದುಹೋಗುವುದು ಯಾಕೆ ಗೊತ್ತಾ ಸಾವಿಗೂ ಮುನ್ನ….?

ಸಾವಿನ ನಂತರದ ವಿಚಾರಗಳನ್ನು ತಿಳಿಯುವ ಕುತೂಹಲ ಹಲವರಲ್ಲಿದೆ. ಗರುಡ ಪುರಾಣದಲ್ಲಿ ಈ ಬಗ್ಗೆ ವಿವರಿಸಲಾಗಿದೆ. ವ್ಯಕ್ತಿಯು ಸಾಯುವ ಮುನ್ನ ಮಾತನಾಡಲು ಅಸಮರ್ಥನಾಗುತ್ತಾನೆ. ಅವನು ಬಯಸಿದರೂ ಅವನಿಗೆ ಮಾತನಾಡಲು ಆಗುವುದಿಲ್ಲ. ಇದಕ್ಕೆ ಕಾರಣವೇನೆಂಬುದನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

ಗರುಡ ಪುರಾಣದಲ್ಲಿ ತಿಳಿಸಿದಂತೆ ಯಮ ದೂತರು ಸಾಯುತ್ತಿರುವ ವ್ಯಕ್ತಿಯ ಬಳಿ ಬಂದು ನಿಲ್ಲುತ್ತಾರೆ. ಅವರನ್ನು ನೋಡಿದಾಗ ವ್ಯಕ್ತಿ ಆತಂಕಕ್ಕೊಳಗಾಗುತ್ತಾನೆ. ಅವನಿಗೆ ಏನೂ ಮಾತನಾಡಲು ಸಾಧ್ಯವಾಗುವುದಿಲ್ಲ.

ಯಮದೂತರು ವ್ಯಕ್ತಿಯನ್ನು ಎಳೆಯುವಾಗ ಅವರ ಬಾಯಿಂದ ವಿಚಿತ್ರ ಪದಗಳು ಹೊರಗೆ ಬರುತ್ತವೆ. ಅದೇ ಸಮಯದಲ್ಲಿ ವ್ಯಕ್ತಿಯ ಜೀವನದ ಎಲ್ಲಾ ಪ್ರಮುಖ ಘಟನೆಗಳು ರೀಲ್ ನಂತೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರಿತ ವ್ಯಕ್ತಿ ನರಕಕ್ಕೆ ಹೋಗಲು ಹೆದರುತ್ತಾನೆ.

ಈ ‘ರಾಶಿಯವರು’ ಸಾಯುವವರಿಗೂ ಸ್ನೇಹವನ್ನು ಕಾಪಾಡಿಕೊಂಡು ಬರುತ್ತಾರಂತೆ

ಆದರೆ ಯಾರು ಕುಟುಂಬದ ವ್ಯಾಮೋಹಕ್ಕೆ ಒಳಗಾಗದೆ ದೇವರ ಭಕ್ತಿಯಲ್ಲಿ ಮುಳುಗುತ್ತಾರೊ ಅವರು ಶಾಂತಿಯುತವಾಗಿ ಸಾಯುತ್ತಾರೆ. ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದವರು ಸುಲಭವಾಗಿ ಜೀವನವನ್ನು ಕಳೆದುಕೊಳ್ಳುತ್ತಾರೆ. ಆದರೆ ಕೆಟ್ಟ ಕೆಲಸ ಮಾಡಿದವರು ಸಾಯುವಾಗ ಕಷ್ಟವನ್ನು ಅನುಭವಿಸುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...