Kannada Duniya

ಕೂದಲಿನ ಬೆಳವಣಿಗೆಗೆ ಈ ತರಕಾರಿಗಳನ್ನು ಸೇವಿಸಿ

ಹವಾಮಾನ ಬದಲಾದಂತೆ ಕೂದಲಿನಲ್ಲಿ ಹಲವು ಸಮಸ್ಯೆಗಳು ಕಂಡುಬರುತ್ತದೆ. ಕೂದಲುದುರುವುದು, ಕೂದಲು ತೆಳ್ಳಗಾಗುವುದು, ಮುಂತಾದ ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ಕೂದಲಿನ ಸಮಸ್ಯೆಯನ್ನು ನಿವಾರಿಸಲು ಈ ತರಕಾರಿಗಳನ್ನು ಸೇವಿಸಿ.

ಸಿಹಿ ಗೆಣಸು : ಇದರಲ್ಲಿ ಬೀಟಾ ಕ್ಯಾರೋಟಿನ್ ಅಧಿಕವಾಗಿರುತ್ತದೆ. ಇದು ಕೂದಲುದುರುವ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ಆ್ಯಂಟಿ ಫಂಗಲ್ ನಿಂದಾಗುವ ನೆತ್ತಿಯ ಸೋಂಕನ್ನು ನಿವಾರಿಸುತ್ತದೆ.

ಬೀಟ್ ರೋಟ್ : ಇದು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಇದು ಕೂದಲುದುರುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದರ ರಸವನ್ನು ಸೇವಿಸಿ.

ಶುಂಠಿ : ಇದಿ ನೆತ್ತಿಯ ಸೋಂಕನ್ನು ಮತ್ತು ತಲೆ ಹೊಟ್ಟನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆಕ್ಸಿಡೇಟಿವ್ ಗಳು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಕೂದಲಿನ ವಿನ್ಯಾಸವನ್ನು ಸುಧಾರಿಸುತ್ತದೆ.

ಹಸಿರು ಸೊಪ್ಪುಗಳು : ಕೂದಲು ಆರೋಗ್ಯವಾಗಿರಲು ಹಸಿರು ಸೊಪ್ಪುಗಳನ್ನು ಸೇವಿಸಿ. ಇದರಲ್ಲಿ ಅನೇಕ ಪೋಷಕಾಂಶಗಳಿರುತ್ತದೆ. ಇದು ಕೂದಲಿನ ಬುಡಕ್ಕೆ ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...