Kannada Duniya

ಎಳೆಮಕ್ಕಳಿಗೆ ಅಪ್ಪಿತಪ್ಪಿಯೂ ಇವುಗಳನ್ನು ನೀಡದಿರಿ….!

ಆರು ತಿಂಗಳ ಬಳಿಕ ಮಕ್ಕಳಿಗೆ ಎದೆ ಹಾಲಿನ ಹೊರತಾಗಿ ಇತರ ಆಹಾರಗಳನ್ನು ನೀಡಲು ಆರಂಭಿಸುತ್ತಾರೆ. ಆದರೆ ಮೂರು ವರ್ಷದ ತನಕ ಮಕ್ಕಳಿಗೆ ಆಹಾರ ನೀಡುವಾಗ ತೀವ್ರ ಎಚ್ಚರ ವಹಿಸಬೇಕು. ನೀವು ನೀಡುವ ಆಹಾರ ಅವರಿಗೆ ಜೀರ್ಣದ ಸಮಸ್ಯೆಯನ್ನು ತಂದೊಡ್ಡಬಹುದು.

ಎರಡರಿಂದ ಮೂರು ವರ್ಷದ ತನಕ ಮಕ್ಕಳಿಗೆ ಸಂಸ್ಕರಿಸಿದ ಸಕ್ಕರೆಯನ್ನು ನೀಡಲೇಬಾರದು. ಇದರಿಂದ ಮಕ್ಕಳಿಗೆ ಹೆಚ್ಚುವರಿ ಕ್ಯಾಲರಿ ದೊರೆಯುತ್ತದೆ ಹಾಗೂ ಅವರ ಬೆಳವಣಿಗೆಗೆ ಮಾರಕವಾಗುತ್ತದೆ.

ಒಂದು ವರ್ಷದೊಳಗಿನ ಮಗುವಿಗೆ ಜೇನುತುಪ್ಪ ನೀಡುವುದು ಕೂಡ ಒಳ್ಳೆಯದಲ್ಲ. ಇದರಲ್ಲಿ ಸಾಕಷ್ಟು ಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳಿವೆ,  ಇದು ಕೆಮ್ಮು ಹಾಗೂ ಶೀತದ ನಿವಾರಣೆಗೆ ಒಳ್ಳೆಯದು ಎಂಬುದೇನೋ ನಿಜ ಆದರೆ ಮಕ್ಕಳಿಗೆ ಇದನ್ನು ನೀಡದಿರುವುದು ಒಳ್ಳೆಯದು.

ಉಪ್ಪು ಹೆಚ್ಚಾಗಿ ಬೆರೆಸಿದ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಗಳಂತಹ ಎಣ್ಣೆಯಲ್ಲಿ ಕರಿದ ಹಾಗೂ ಉಪ್ಪು ಮಿಶ್ರಿತ ಆಹಾರಗಳನ್ನು ಮೂರು ವರ್ಷದ ತನಕ ಮಕ್ಕಳಿಗೆ ಕೊಡದಿರುವುದು ಒಳ್ಳೆಯದು. ಇದರಿಂದ ಕಿಡ್ನಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಕ್ಕಳಿಗೆ ಜ್ವರವಿದ್ದಾಗ ಯಾವ ಆಹಾರ ನೀಡಿದರೆ ಒಳ್ಳೆಯದು….?

12 ತಿಂಗಳ ತನಕ ಮಗುವಿಗೆ ಹಸುವಿನ ಹಾಲನ್ನು ನೀಡಬೇಕಿಲ್ಲ, ತಾಯಿಯ ಎದೆಯ ಹಾಲು ಸಾಕು. ಅದೇ ರೀತಿ ಚೀಸ್, ಪನ್ನೀರ್ ಮೊದಲಾದ ಆಹಾರಗಳನ್ನು ಒಂದು ವರ್ಷದೊಳಗಿನ ಮಕ್ಕಳಿಗೆ ನೀಡುವುದು ಒಳ್ಳೆಯದಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...