Kannada Duniya

ಈ ಸೊಪ್ಪು ಬಳಸುವುದರಿಂದ ಆಗುವ ಲಾಭವೇನು ಗೊತ್ತಾ…?

ದಾಳಿಂಬೆ ಹಣ್ಣಿನ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳಿವೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಅಂದರೆ ಇದರ ಸೊಪ್ಪಿನಿಂದಲು ಅಷ್ಟೇ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

-ದಾಳಿಂಬೆ ಎಲೆಗಳನ್ನು ಹಲವು ರೋಗಗಳ ಗುಣಪಡಿಸುವ ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದರ ಎಲೆಗಳಿಂದ ತಯಾರಿಸಿದ ಕಷಾಯವನ್ನು ನಿಯಮಿತವಾಗಿ ಕುಡಿಯುವುದರಿಂದ ಕೊಬ್ಬು ಕರಗುತ್ತದೆ.

-ಈ ಎಲೆಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಫಲಕಾರಿಯಾಗಿದೆ. ದೇಹದ ಉಷ್ಣತೆಯ ಕಾರಣಕ್ಕೆ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಂಡಿದ್ದರೆ ದಾಳಿಂಬೆ ಎಲೆಗಳಿಂದ ತಯಾರಿಸಿದ ಕಷಾಯವನ್ನು ಕುಡಿಯಿರಿ.

-ದಾಳಿಂಬೆ ಎಲೆಗಳನ್ನು ರುಬ್ಬಿ, ನೀರು ಬೆರೆಸಿ ಕುದಿಸಿ.ರಾತ್ರಿ ಮಲಗುವ ಮುನ್ನ ನಿಯಮಿತವಾಗಿ ಇದನ್ನು ಕುಡಿಯಿರಿ. ಇದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.

ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರು ಈ ವಸ್ತುಗಳನ್ನು ಸೇವಿಸಿದರೆ ಕಣ‍್ಣಿಗೆ ಒಳ್ಳೆಯದು….!

-ದಾಳಿಂಬೆ ಎಲೆಗಳಿಂದ ತಯಾರಿಸಿದ ಪೇಸ್ಟ್ ಅನ್ನು ಮೊಡವೆಯ ಇರುವ ಜಾಗಕ್ಕೆ ಹಚ್ಚಿದರೆ, ಮೊಡವೆಗಳು ಮಾತ್ರವಲ್ಲ ಅದರ ಕಲೆಗಳು ದೂರವಾಗುತ್ತವೆ. ಇದು ನಿಮ್ಮ ತ್ವಚೆಯ ರಂಧ್ರಗಳನ್ನು ಮುಚ್ಚಿ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಹಾಗಿದ್ದರೆ ತಡವೇಕೆ ಇಂದೇ ನಿಮ್ಮ ಹಿತ್ತಲಲ್ಲಿ ಬೆಳೆದ ದಾಳಿಂಬೆ ಗಿಡದ ಸೊಪ್ಪನ್ನು ತಂದು ಬಳಸಿ ನೋಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...