Kannada Duniya

ಈ ಸಮಸ್ಯೆ ಇರುವವರು ಹಾಲಿನೊಂದಿಗೆ ಬಾಳೆಹಣ್ಣನ್ನು ಸೇವಿಸಬೇಡಿ

ಬಾಳೆಹಣ್ಣು ಮತ್ತು ಹಾಲು ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಹಲವು ಪೋಷಕಾಂಶಗಳಿದ್ದು, ಅವು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಬಾಳೆಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬಾರದಂತೆ.

ಅಸ್ತಮಾ ಸಮಸ್ಯೆ ಇರುವವರು ಹಾಲು ಮತ್ತು ಬಾಳೆಹಣ್ಣನ್ನು ಮಿಕ್ಸ್ ಮಾಡಿ ಸೇವಿಸಬೇಡಿ. ಯಾಕೆಂದರೆ ಇದು ಕಫದ ಸಮಸ್ಯೆಯನ್ನು ಹೆಚ್ಚಿಸುತ್ತದೆಯಂತೆ. ಮತ್ತು ಕೆಮ್ಮಿನ ಸಮಸ್ಯೆಯನ್ನು ಉಂಟುಮಾಡುತ್ತದೆಯಂತೆ.

ಹಾಗೇ ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಬಾಳೆಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬೇಡಿ. ಯಾಕೆಂದರೆ ಇವೆರಡರಲ್ಲಿ ಅಧಿಕ ಪೋಷಕಾಂಶವಿದ್ದು, ಅದನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಕಷ್ಟವಾಗಬಹುದು. ಇದರಿಂದ ಅಜೀರ್ಣ, ವಾಂತಿ ಅತಿಸಾರದಂತಹ ಸಮಸ್ಯೆಗಳು ಕಾಡಬಹುದು.

ಸೈನಸ್ ಸಮಸ್ಯೆ ಇರುವವರು ಬಾಳೆಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬೇಡಿ. ಯಾಕೆಂದರೆ ಇವು ಕಫದ ಉತ್ಪತ್ತಿ ಮಾಡುವುದರಿಂದ ಅದು ಸೈನಸ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...