Kannada Duniya

ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ಸೇವಿಸಬೇಡಿ….!

ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನಬಹುದು. ಹಾಗೇ ಕೆಲವು ತರಕಾರಿಗಳನ್ನು ಬೇಯಿಸಿ ತಿನ್ನಬೇಕು. ಇದರಿಂದ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ಇದರಿಂದ ನೀವು ಆರೋಗ್ಯವಾಗಿರಬಹುದು. ಆದರೆ ಈ ತರಕಾರಿಗಳನ್ನು ಹಸಿಯಾಗಿ ತಿಂದರೆ ಆರೋಗ್ಯ ಕೆಡುತ್ತದೆಯಂತೆ.

ಬದನೆಕಾಯಿ : ಇದನ್ನು ಬೇಯಿಸಿ ತಿಂದರೆ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದರೆ ಇದನ್ನು ಹಸಿಯಾಗಿ ತಿಂದರೆ ಇದರಲ್ಲಿರುವ ಅಂಶ ಹೊಟ್ಟೆಯ ಸಮಸ್ಯೆಯನ್ನು ಉಂಟು ಮಾಡುತ್ತದೆಯಂತೆ.

ಪಾಲಕ್ : ಇದನ್ನು ಹಸಿಯಾಗಿ ತಿನ್ನಬಾರದು. ಇದರಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುತ್ತದೆಯಂತೆ. ಹಾಗಾಗಿ ಇದನ್ನು ಬೇಯಿಸಿ ತಿಂದರೆ ಉತ್ತಮ.

ಬೊಜ್ಜನ್ನು ನಿಯಂತ್ರಿಸಬೇಕೆ…? ಈ ಬಿಳಿ ವಸ್ತುಗಳ ಸೇವನೆಯಿಂದ ದೂರವಿರಿ….!

ಆಲೂಗಡ್ಡೆ : ಇದನ್ನು ಹಸಿಯಾಗಿ ತಿನ್ನುವ ಬದಲು ಬೇಯಿಸಿ ತಿನ್ನಿ. ಇದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದರೆ ಹಸಿಯಾಗಿ ತಿಂದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...