Kannada Duniya

ನಿಮ್ಮ ಮುಖದಲ್ಲಿ ಮೊಡವೆಯ ಕಲೆ ಉಳಿದಿದೆಯಾ…?

ಸಾಮಾನ್ಯವಾಗಿ ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಕ್ರಮೇಣ ದೂರವಾದರೂ ಅದರ ಕಲೆಗಳು ಹಾಗೆ ಉಳಿದುಬಿಡುತ್ತವೆ. ಇದು ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಕಲೆಗಳ ನಿವಾರಣೆಗೆ ನೀವು ಕೆಲವು ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡಬಹುದು.

ನಿಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಅಲೋವೆರಾ ಇದಕ್ಕೆ ಪರಿಪೂರ್ಣ ಪರಿಹಾರವಾಗಿದೆ. ಇದು ತ್ವಚೆಯ ಮೇಲಿರುವ ಮೊಡವೆ ಕಲೆಗಳು ಮಾತ್ರವಲ್ಲ ಗಾಯದ ಕಲೆಗಳನ್ನು ದೂರ ಮಾಡುತ್ತದೆ.

ಕಿತ್ತಳೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಸಿಟ್ರಿಕ್ ಆಸಿಡ್ ಸಾಕಷ್ಟು ಪ್ರಮಾಣದಲ್ಲಿ ಇರುವ ಈ ಪುಡಿಯ ಪೇಸ್ಟ್ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿ. ಮೊಡವೆ ಕಲೆಗಳಿರುವ ಜಾಗಕ್ಕೆ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ.

ಅದೇ ರೀತಿ ನಿಂಬೆ ಹಣ್ಣಿನಲ್ಲೂ ಸಿಟ್ರಿಕ್ ಆಮ್ಲ ಇರುವುದರಿಂದ ಬೇರೆ ಫೇಸ್ ಪ್ಯಾಕ್ ಗಳ ಜೊತೆ ನಿಂಬೆ ರಸವನ್ನು ಸೇರಿಸಿ ಹಚ್ಚಿಕೊಳ್ಳಿ.

ಆಲೂಗಡ್ಡೆಯನ್ನು ಕಟ್ ಮಾಡಿ ಕಲೆಗಳಿರುವ ಜಾಗಕ್ಕೆ ಉಜ್ಜಿ ಅಥವಾ ಇದರ ಜ್ಯೂಸ್ ತೆಗೆದು ಹಚ್ಚಿ. ಅರಿಶಿನ ಹಾಗೂ ಕಡಲೆ ಹಿಟ್ಟನ್ನ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...