Kannada Duniya

ಕುತ್ತಿಗೆ ಕಪ್ಪನ್ನು ಈ ವಿಧಾನದ ಮೂಲಕ ನಿವಾರಿಸಿಕೊಳ್ಳಿ!

ದೇಹದ ಪ್ರತಿಯೊಂದು ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹಲವರ ಮುಖದ ಬಣ್ಣ ಬೆಳ್ಳಗಿದ್ದರೂ ಕುತ್ತಿಗೆ ಭಾಗ ಕಪ್ಪಾಗಿರುತ್ತದೆ ಹಾಗೂ ಅಲ್ಲಲ್ಲಿ ಗುಳ್ಳೆಗಳು ಇರುತ್ತವೆ‌. ಇದು ಸಂಪೂರ್ಣ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಈ ಕೆಲವು ಮನೆಮದ್ದುಗಳ ಮೂಲಕ ಕುತ್ತಿಗೆಯ ಭಾಗ
ಕಪ್ಪಾಗಿರುವುದನ್ನು ಸರಿಪಡಿಸಬಹುದು.

ಆಪಲ್ ಸೈಡರ್ ವಿನೆಗರ್ ಗೆ ತುಸು ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಹತ್ತಿಯ ಉಂಡೆಯಿಂದ ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ
ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳು ದೂರವಾಗಿ ನೈಸರ್ಗಿಕ ಕಾಂತಿ ದೊರೆಯುತ್ತದೆ.

ಅದೇ ರೀತಿ ಬೇಕಿಂಗ್ ಸೋಡಾ  ಚರ್ಮದ ಮೇಲಿನ ಕೊಳೆಯನ್ನು ದೂರ ಮಾಡುತ್ತದೆ‌. ಇದಕ್ಕಾಗಿ ನೀವು ಎರಡು ಚಮಚ ಬೇಕಿಂಗ್ ಸೋಡಾಗೆ ತುಸು ನೀರು ಹಾಕಿ ದಪ್ಪನೆಯ ಪೇಸ್ಟ್ ತಯಾರಿಸಿ. ಕುತ್ತಿಗೆ ಭಾಗಕ್ಕೆ ಹಚ್ಚಿ ಕೆಲವು ನಿಮಿಷಗಳ ಬಳಿಕ ಸ್ವಚ್ಛವಾಗಿ ತೊಳೆಯಿರಿ. ನಂತರ ಮಾಯಿಶ್ಚರೈಸ್ ಮಾಡುವುದನ್ನು ಮರೆಯದಿರಿ.

ಆಲೂಗೆಡ್ಡೆ ರಸದಿಂದಲೂ ಇದೇ ಲಾಭ ಪಡೆಯಬಹುದು. ಆಲೂಗಡ್ಡೆಯನ್ನು ಸ್ವಚ್ಛವಾಗಿ ತೊಳೆದು ಬಳಿಕ ತುರಿದು ರಸ ತೆಗೆದುಕೊಳ್ಳಿ. ಇದನ್ನು ಕಪ್ಪಾದ ಭಾಗಕ್ಕೆ ಹಚ್ಚಿ 10 ನಿಮಿಷ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...