Kannada Duniya

ಕತ್ತಿನ ಭಾಗ ಕಪ್ಪಾಗಿದ್ದರೆ ಅದು ಈ ರೋಗದ ಲಕ್ಷಣವಂತೆ

ಕೆಲವೊಮ್ಮ ಮಹಿಳೆಯರು ಮತ್ತು ಪುರುಷರ ಕುತ್ತಿಗೆ ಭಾಗ ಕಪ್ಪಾಗಿ ಕಂಡುಬರುತ್ತದೆ. ಇದನ್ನು ಅವರು ಎಷ್ಟೇ ಸ್ವಚ್ಛಗೊಳಿಸಿದರೂ ಅದು ನಿವಾರಣೆಯಾಗುವುದಿಲ್ಲ. ಹಾಗಾಗಿ ಇದನ್ನ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದು ಗಂಭೀರ ರೋಗದ ಲಕ್ಷಣವಂತೆ.

ಇದು ಮಧುಮೇಹ ಸಮಸ್ಯೆಯ ಲಕ್ಷಣವಂತೆ. ಪ್ರಿಡಯಾಬಿಟಿಸ್ ಸಮಸ್ಯೆ ಇರುವವರ ಕುತ್ತಿಗೆ ಭಾಗ ಕಪ್ಪಾಗಿ ಕಂಡುಬರುತ್ತದೆಯಂತೆ. ಇದು ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆಯಂತೆ. ದೇಹದಲ್ಲಿ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದಾಗ ಈ ಸಮಸ್ಯೆ ಕಂಡುಬರುತ್ತದೆಯಂತೆ.

ಹಾಗೇ ಹಾರ್ಮೋನ್ ನಲ್ಲಿ ಅಸಮತೋಲನ ಉಂಟಾದಾಗ ಈ ಸಮಸ್ಯೆ ಕಾಡುತ್ತದೆಯಂತೆ. ಅಲ್ಲದೇ ಅಂಡಾಶಯದಲ್ಲಿ ಗಡ್ಡೆಗಳು, ಹೈಪೋಥೈರಾಯ್ಡಿಸಂ, ಮೂತ್ರ ಜನಕಾಂಗದ ಗ್ರಂಥಿಗಳಲ್ಲಿ ಸಮಸ್ಯೆ ಇದ್ದಾಗ ಕತ್ತಿನ ಭಾಗ ಕಪ್ಪಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...