Kannada Duniya

ಮದುವೆಯ ನಂತರ ಮೊದಲ ಹೋಳಿಯನ್ನು ಆಚರಿಸುವವರು ಈ ನಿಯಮ ಪಾಲಿಸಿ

ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬ. ಹಾಗಾಗಿ ಈ ವರ್ಷ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆ ಮದುವೆಯಾದವರು ತಮ್ಮ ವೈವಾಹಿಕ ಜೀವನ ಉತ್ತಮವಾಗಿರಲು ಹೋಳಿ ಹಬ್ಬದಂದು ಈ ನಿಯಮ ಪಾಲಿಸಿ.

ನವವಧು ಮದುವೆಯ ನಂತರದ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲಿ ಆಚರಿಸಬೇಕು. ಯಾಕೆಂದರೆ ಹೋಳಿ ದಹನದ ಬೆಂಕಿಯನ್ನು ಅತ್ತೆ ಸೊಸೆ ಒಟ್ಟಿಗೆ ನೋಡಬಾರದಂತೆ. ಇದರಿಂದ ಅವರ ಸಂಬಂಧದಲ್ಲಿ ಬಿರುಕು ಮೂಡುತ್ತದೆಯಂತೆ.

ಹಾಗೇ ಹೋಳಿ ಹಬ್ಬದಂದು ನವವಿವಾಹಿತೆ ಕಪ್ಪು ಬಟ್ಟೆಗಳನ್ನು ಧರಿಸಬಾರದು. ಯಾಕೆಂದರೆ ಕಪ್ಪು ಬಣ್ಣ ನವವಧುವಿಗೆ ಮಂಗಳಕರವಲ್ಲವಂತೆ. ಹಾಗೇ ದಂಪತಿಗಳ ಮಧ್ಯೆ ಕಲಹವಿದ್ದರೆ ಆ ದಿನ ಅವರು ತಮ್ಮ ಹಣೆಗೆ ಅರಿಶಿನದ ತಿಲಕವನ್ನು ಹಚ್ಚಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...