Kannada Duniya

ಆಹಾರ ಅಲರ್ಜಿಯನ್ನು ಹೀಗೆ ಪತ್ತೆಹಚ್ಚಿ ಮಕ್ಕಳಲ್ಲಿ …..!

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚಿನ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಮೊದಲು ಆಸ್ತಮಾ, ಎಸ್ಟಿಮಾ ಮತ್ತು ಚರ್ಮದ ಸಮಸ್ಯೆ ಮಕ್ಕಳಲ್ಲಿ ಕಂಡುಬರುತ್ತಿತ್ತು. ಆದರೆ ಈಗ ಆಹಾರದ ಅಲರ್ಜಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇದನ್ನು ಗುರುತಿಸಿ ಅದನ್ನು ಪರಿಹರಿಸಿಕೊಳ್ಳಿ.

ಸಾಮಾನ್ಯವಾಗಿ ಮೊಟ್ಟೆ, ಹಾಲು ಮತ್ತು ಕಡಲೆಕಾಯಿಗಳು ಮಕ್ಕಳಲ್ಲಿ ಆಹಾರ ಅಲರ್ಜಿಯ ಸಾಮಾನ್ಯ ಕಾರಣಗಳಾಗಿವೆ . ಹಣ್ಣುಗಳು, ದ್ವಿದಳ ಧಾನ್ಯಗಳು ಸಹ ಅಲರ್ಜಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಧೂಳು, ಪರಾಗ, ಕೀಟ ವಿಷ ಮತ್ತು ರಾಸಾಯನಿಕಗಳು ಈ ಅಲರ್ಜಿಯನ್ನು ಪ್ರಚೋದಿಸುತ್ತದೆ. ಇತ್ತೀಚಿಗೆ ಶೇಖಡಾ 50 ರಷ್ಟು ಮಕ್ಕಳು ಆಹಾರ ಅಲರ್ಜಿಯಿಂದ ಬಳಲುತ್ತಿದ್ದಾರೆ. ಹಾಗಾಗಿ ಪೋಷಕರು ಮಕ್ಕಳಲ್ಲಿ ಆಹಾರ ಅಲರ್ಜಿಯ ಲಕ್ಷಣಗಳನ್ನು ಪತ್ತೆಹಚ್ಚಿ ಆ ಆಹಾರ ನೀಡುವುದನ್ನು ತಪ್ಪಿಸಿ.

Curds Benefit: ಬಹೂಪಯೋಗಿ ಮೊಸರು: ಮಿಸ್ ಮಾಡದಿರಿ…!

ಮಕ್ಕಳಿಗೆ ಯಾವುದೇ ಆಹಾರದ ಅಲರ್ಜಿ ಇದ್ದರೆ, ಅವರು ಅದನ್ನು ಸೇವಿಸಿದ ಒಂದು ಗಂಟೆಯ ನಂತರ ರೋಗಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಮಕ್ಕಳಲ್ಲಿ ವಾಂತಿ, ಅತಿಸಾರ, ಹೊಟ್ಟೆಯ ಸೆಳೆತ, ತುಟಿ, ನಾಲಿಗೆ, ಬಾಯಿಯಲ್ಲಿ ಊತ ಆಹಾರ ಅಲರ್ಜಿಯ ಲಕ್ಷಣವಾಗಿದೆ. ಗಂಟಲು ಅಥವಾ ದೇಹದ ಇತರ ಭಾಗಗಳಲ್ಲಿ ತುರಿಕೆ ಸಂಭವಿಸಬಹುದು. ಕೆಲವೊಮ್ಮೆ ನಿಮ್ಮ ಮಗುವಿನ ಉಸಿರಾಟದಲ್ಲಿಯೂ ಸಮಸ್ಯೆ ಕಂಡುಬರುತ್ತದೆ. ಆಹಾರ ಅಲರ್ಜಿ ಲಕ್ಷಣ ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...