Kannada Duniya

ಅಸ್ತಮಾ ರೋಗಿಗಳು ಬೇವಿನೆಣ್ಣೆಯನ್ನು ಹೀಗೆ ಬಳಸಿ ಉಸಿರಾಟದ ಸಮಸ್ಯೆಯನ್ನು ನಿವಾರಿಸಿಕೊಳ್ಳಿ

ಅಸ್ತಮಾ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಡುತ್ತಿರುವಂತಹ ಒಂದು ಉಸಿರಾಟದ ಸಮಸ್ಯೆಯಾಗಿದೆ. ಇದರ ದಾಳಿಯಿಂದ ಶ್ವಾಸಕೋಶದ ನಾಳ ಕುಗ್ಗುತ್ತದೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಬೇವಿನ ಎಣ್ಣೆಯನ್ನು ಬಳಸಿ.

ಬೇವು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿದೆ. ಇದು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಇದರ ಎಲೆಗಳು, ಹಣ್ಣುಿಗಳು, ಬೀಜಗಳು, ತೊಗಟೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ.

ಹಾಗಾಗಿ ಅಸ್ತಮಾ ರೋಗಿಗಳು ಬೇವಿನೆಣ್ಣೆಯನ್ನು ಬಳಸಿ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಇದನ್ನು ಬಿಸಿ ನೀರಿನಲ್ಲಿ ಬೆರೆಸಿ ಹಬೆ ತೆಗೆದುಕೊಳ್ಳಿ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶ ಶ್ವಾಸಕೋಶಕ್ಕೆ ತಲುಪಿ ಅಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಶ್ವಾಸನಾಳಗಳು ತೆರೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಉಸಿರಾಟ ಸುಲಭವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...