Kannada Duniya

ಅಡುಗೆಗೆ ಈ ಎಣ್ಣೆಯನ್ನು ಬಳಸಿದರೆ ಒಳ್ಳೆಯದಂತೆ

ಪ್ರತಿಯೊಬ್ಬರು ಅಡುಗೆ ಮಾಡಲು ಎಣ್ಣೆಯನ್ನು ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಅಡುಗೆಗೆ ಸರಿಯಾದ ಎಣ್ಣೆಯನ್ನು ಬಳಸಿ. ಇಲ್ಲವಾದರೆ ಇದರಿಂದ ಅನಾರೋಗ್ಯಕ್ಕೀಡಾಗುತ್ತೀರಿ.

ನೀವು ರೊಟ್ಟಿ ಮತ್ತು ಪರೋಟಾವನ್ನು ತಯಾರಿಸಲು ತುಪ್ಪವನ್ನು ಬಳಸಿ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ದೇಹವನ್ನು ಆರೋಗ್ಯವಾಗಿಡುತ್ತದೆ.
ಹಾಗೇ ಬೇಳೆಕಾಳಿನ ಅಡುಗೆ ತಯಾರಿಸಲು ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕಡಲೆ ಕಾಯಿ ಎಣ್ಣೆಯನ್ನು ಬಳಸಿ. ಇದು ಬೇಳೆಕಾಳುಗಳಿನ ಪೋಷಕಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ.

ಅಲ್ಲದೇ ತರಕಾರಿಗಳನ್ನು ಹುರಿಯಲು ಆಲಿವ್ ಆಯಿಲ್ ಅನ್ನು ಬಳಸಿ. ಇದರಲ್ಲಿ ವಿಟಮಿನ್ ಮತ್ತು ಜೀವಸತ್ವಗಳು ಅಧಿಕವಾಗಿದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತದೆ.

ಆದರೆ ಸೂರ್ಯಕಾಂತಿ, ವೆಜಿಟೇಬಲ್ ಆಯಿಲ್, ತಾಳೆ ಎಣ್ಣೆಯನ್ನು ಅಡುಗೆಗೆ ಬಳಸಬೇಡಿ. ಇದರಿಂದ ದೇಹ ಅನಾರೋಗ್ಯಕ್ಕೀಡಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...